ಮಳವಳ್ಳಿ : ಸಾರ್ವತ್ರಿಕವಾದ ಔದ್ಯೋಗಿಕ ಕ್ಷೇತ್ರಗಳನ್ನು ಖಾಸಗಿಕರಣಗೊಳಿಸುವ ಮೂಲಕ ಜನಸಾಮಾನ್ಯರ ಉದ್ಯೋಗಾವಕಾಶಗಳನ್ನು ನಾಶ ಮಾಡುವ ಮೂಲಕ ಆಧುನಿಕ ಗುಲಾಮಗಿರಿಯನ್ನು ದೇಶದ ಮೇಲೆ ಹೇರಲು ಕೇಂದ್ರದಲ್ಲಿನ ಬಿ ಜೆ ಪಿ ಸರ್ಕಾರ ಹೊರಟಿದೆ ಎಂದು ಬಹುಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷ ಎಂ ಕೃಷ್ಣಮೂರ್ತಿ ಆರೋಪಿಸಿದ್ದಾರೆ.
ಮಳವಳ್ಳಿ ಪಟ್ಟಣದ ಬಿ ಎಸ್ಪಿ ಕಚೇರಿಯಲ್ಲಿ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಿದ್ದ ಸಮಾರಂಭ ದಲ್ಲಿ ಪಟ್ಟಣದ ಪೌರಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದ ಅವರು ಕರೋನ ಹಾವಳಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿ ಇಡೀ ಉದ್ಯಮವೇ ಬಂದ್ ಆಗಿ ಸಾವಿರಾರು ಕೋಟಿ ನಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಅಂಬಾನಿಯAತವರಿಗೆ ಸೇರಿದ ಬೃಹತ್ ಕಂಪನಿಗಳು ಲಕ್ಷ ಲಕ್ಷ ಕೋಟಿ ಲಾಭ ಮಾಡುತ್ತಿರುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು ದೇಶದ ಕೋಟ್ಯಾಂತರ ಜನರಿಗೆ ಉದ್ಯೋಗ ಒದಗಿಸುತ್ತಿದ್ದ ರೈಲ್ವೆ, ವಿಮಾನ, ವಿದ್ಯುತ್ ಕ್ಷೇತ್ರ ಸೇರಿದಂತೆ ಎಲ್ಲಾ ಸಾರ್ವತ್ರಿಕ ಉದ್ಯಮ ಬಿಜೆಪಿ ಪರವಾದ ಕಾರ್ಪೊರೇಟ್ ಕಂಪನಿಗಳಿಗೆ ವಹಿಸಿ ಖಾಸಗಿಕರಣ ಮಾಡುವ ಮೂಲಕ ದೇಶದ ಕೋಟ್ಯಾಂತರ ಜನ ದುಡಿಯುವ ವರ್ಗ ಈ ಕಾರ್ಪೊರೇಟ್ ಕಂಪನಿಗಳ ಜೀತದಾಳುವಾಗುವಂತೆ ಮಾಡಿ ದೇಶದಲ್ಲಿ ಆಧುನಿಕ ಗುಲಾಮಗಿರಿಯನ್ನು ಜಾರಿಗೆ ತರುವುದು ಕೇಂದ್ರದಲ್ಲಿನ ಮೋದಿ ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.
ಇದರ ಭಾಗವಾಗಿ ಕೇಂದ್ರ ಸರ್ಕಾರದ ಭಾರಿ ವಿರೋಧ ವನ್ನು ಲೆಕ್ಕಿಸದೆ ಕೃಷಿ ವಲಯಕ್ಕೆ ಮಾರಕವಾದ ಕೃಷಿಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆಗಳನ್ನು ಜಾರಿಗೆ ತಂದಿದ್ದು ಜನ ಈ ಬಗ್ಗೆ ಎಚ್ಚೆತ್ತು ಕೊಳ್ಳದಿದ್ದರೆ ಮುಂದೆ ಭಾರಿ ಅಪಾಯ ಎದುರಿಸ ಬೇಕಾಗುವುದು ಎಂದು ಅವರು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಪುರಸಭೆಯ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಶಿವಶಂಕರ್, ಉಪಾಧ್ಯಕ್ಷೆ ಲಿಂಗರಾಜಮ್ಮ, ತಾಲ್ಲೂಕು ಅಧ್ಯಕ್ಷ ಕಮಲ್ ನಾಥ್ ಷರೀಫ್, ಮಹೇಂದ್ರ, ಶಿವಮೂರ್ತಿ, ಚಲುವರಾಜು ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ವರದಿ : ಬಿ. ಮಲ್ಲಿಕಾರ್ಜುನಸ್ವಾಮಿ ಮಳವಳ್ಳಿ.
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ