December 22, 2024

Bhavana Tv

Its Your Channel

ಕರೋನಾ ಗೆದ್ದು ಬಂದ ಶಾಸಕ ಡಾ.ಕೆ.ಅನ್ನದಾನಿ ಅವರಿಗೆ ಮಳವಳ್ಳಿ ಪಟ್ಟಣದಲ್ಲಿ ಅದ್ದೂರಿ ಸ್ವಾಗತ

ಮಳವಳ್ಳಿ ; ಕರೋನ ಗೆದ್ದು ಬಂದ ಶಾಸಕ ಡಾ. ಕೆ. ಅನ್ನದಾನಿ ಅವರಿಗೆ ಮಳವಳ್ಳಿ ಪಟ್ಟಣದಲ್ಲಿ ಇಂದು ಅದ್ದೂರಿ ಸ್ವಾಗತ ದೊರೆಯಿತು.
  ಕೊರೋನಾ ಸೋಂಕಿಗೆ ಒಳಗಾಗಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಇಂದು ಮಧ್ಯಾಹ್ನ ಮಳವಳ್ಳಿಗೆ ಆಗಮಿಸಿದ ಶಾಸಕರಿಗೆ ಅದ್ದೂರಿ ಸ್ವಾಗತವನ್ನು ಜೆಡಿಎಸ್ ಮುಖಂಡರು ಕಾರ್ಯಕರ್ತರು ನೀಡಿದರು .
  ಪಟ್ಟಣದ ದೊಡ್ಡ ಕೆರೆ ಸಮೀಪವಿರುವ ದಂಡಿನ ಮಾರಮ್ಮ ದೇವಾಲಯದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ದAಡಿನ ಮಾರಮ್ಮನಿಗೆ ೧೦೧ ತೆಂಗಿನಕಾಯಿ ಹೊಡೆಯುವ ಹರಕೆ  ಹಾಗೂ ವಿಶೇಷ ಪೂಜೆಯನ್ನು  ಸಲ್ಲಿಸಿದ್ದರು.
ಶಾಸಕ ಡಾ ಕೆ ಅನ್ನದಾನಿ ಮಾತನಾಡಿ ಮಳವಳ್ಳಿ ಕ್ಷೇತ್ರದ ಜನರು ನನ್ನ ಆರೋಗ್ಯದ ಹಾರೈಕೆಗಾಗಿ ದೇವಾಲಯ ಗಳಲ್ಲಿ ಪೂಜೆ ಸಲ್ಲಿಸಿದ್ದಾರೆ ಅವರಿಗೆ ನಾನು ಎಂದಿಗೂ ಚಿರ ಋಣಿಯಾಗಿರುತ್ತೇನೆ . ನನ್ನ ಕ್ಷೇತ್ರದಲ್ಲಿ ಕೊರೊನಾ ಸೋಂಕಿಗಾಗಿ ನಿರಂತರವಾಗಿ ಹೋರಾಟ ಮಾಡಿದ್ದೇನೆ ಕೋವಿಡ್ ಸೆಂಟರ್‌ಗಳಿಗೆ ಹೋಗಿ ಜನರ ಹಾರೈಕೆ ಮಾಡಿದ್ದೇನೆ  ನನಗೆ ಜನರ ಆರೋಗ್ಯವೇ ಮುಖ್ಯ  ಅವರ ಸೇವೆಗೆ ನಾನು ಎಂದು ಬದ್ಧವಾಗಿರುತ್ತೇನೆ  ಕೊರೋನಾ ಸೋಂಕು ನನಗೆ ತಗಲಿದ್ದರೂ ಸಹ ನಾನು ಭಯಪಡುವುದಿಲ್ಲ ಎಂದು ತಿಳಿಸಿದರು .
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ರಾಧ ನಾಗರಾಜು ಉಪಾಧ್ಯಕ್ಷ ನಂದಕುಮಾರ್ ಪುರಸಭಾ ಸದಸ್ಯರಾದ ಪ್ರಶಾಂತ್ ಕುಮಾರ್, ನೂರುಲ್ಲಾ,ಸಿದ್ದರಾಜು, ಬಸವರಾಜು.ದೆuಟಿಜeಜಿiಟಿeಜಡ್ಡಯ್ಯ .ಪುಟ್ಟಸ್ವಾಮಿ .ಪ್ರಮೀಳಾ. ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮಲ್ಲೇಗೌಡ,ಮುಖಂಡರಾದ ಕುಮಾರ್ .ಅಂಕನಾಥ್ ಚಿಕ್ಕರಾಜು ಸೇರಿದಂತೆ ಇತರರಿದ್ದರು.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: