December 22, 2024

Bhavana Tv

Its Your Channel

ಪುರಸಭೆಯ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಪುಟ್ಟಸ್ವಾಮಿ ಅವಿರೋಧ ಆಯ್ಕೆ

ಮಳವಳ್ಳಿ ; ಮಳವಳ್ಳಿ ಪುರಸಭೆಯ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ೪ನೇ ವಾಡ್೯ ಸದಸ್ಯರಾದ ಪುಟ್ಟಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಯ ಆಯ್ಕೆ ಕಾರ್ಯ ನಡೆಯಿತು.
ಪುಟ್ಟಸ್ವಾಮಿ ಸೇರಿದಂತೆ ಬಸವರಾಜು, ಭೀಮಣ್ಣ, ಪ್ರಶಾಂತ್, ರಾಜಶೇಖರ್, ನೂರುಲ್ಲಾ, ಸಿದ್ದರಾಜು, ಸವಿತಾ ವೆಂಕಟೇಶ್, ರವಿ, ಕೃಷ್ಣ, ಹಾಗೂ ಸವಿತಾ ಕೃಷ್ಣ ಮೂರ್ತಿ ಅವರನ್ನು ಆಯ್ಕೆ ಮಾಡಲಾಯಿತು.
ನಂತರ ಎಲ್ಲಾ ಸದಸ್ಯರು ಸೇರಿ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಪುಟ್ಟಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನೂತನ ಸ್ಥಾಯಿ ಅಧ್ಯಕ್ಷರನ್ನು ಅಭಿನಂದಿಸಿದ ಪುರಸಭಾಧ್ಯಕ್ಷೆ ರಾಧಾ ನಾಗರಾಜು, ಉಪಾಧ್ಯಕ್ಷ ಟಿ ನಂದಕುಮಾರ್ ಅವರು ವೇದಿಕೆಗೆ ಬರಮಾಡಿ ಕೊಂಡರು.
ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ಸದಸ್ಯರು ಹಾಗೂ ತಮ್ಮ ಆಯ್ಕೆಗೆ ನೆರವಾದ ಶಾಸಕ ಡಾ ಕೆ ಅನ್ನದಾನಿ ಅವರಿಗೆ ಅಧ್ಯಕ್ಷ ಪುಟ್ಟಸ್ವಾಮಿ ಧನ್ಯವಾದಗಳನ್ನು ಸಲ್ಲಿಸಿದರು.
ಇದಕ್ಕೂ ಮೊದಲು ನಡೆದ ಚರ್ಚೆಯಲ್ಲಿ ಪಟ್ಟಣದ ಯೋಜನಾ ಕಚೇರಿಯ ಅಧಿಕಾರಿಗಳು ಸರಿಯಾಗಿ ಕಚೇರಿಯಲ್ಲಿ ಇರದೆ ಸಾರ್ವಜನಿಕರ ಕೈಗೂ ಸಿಗದೆ ಜನರು ತೀವ್ರ ತೊಂದರೆ ಅನುಭವಿಸುತ್ತಿರುವ ಕುರಿತು ಸದಸ್ಯರಾದ ಶಿವು ಪ್ರಶಾಂತ್, ರಾಜಶೇಖರ್ ಮತ್ತಿತರರು ತೀವ್ರ ಅಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ಉಪಾಧ್ಯಕ್ಷ ಟಿ ನಂದಕುಮಾರ್ ಅವರು ಯೋಜನಾ ಇಲಾಖೆಯವರ ಉದಾಸೀನತೆಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿರುವುದರ ಜೊತೆಗೆ ಸಕಾಲಕ್ಕೆ ಪರವಾನಗಿ ನೀಡದಿರುವ ಕಾರಣ ಪುರಸಭೆಗೆ ಬರಬೇಕಾದ ಆದಾಯ ಸಹ ಕೈತಪ್ಪುತ್ತಿದೆ ಎಂದು ಯೋಜನಾ ಕಚೇರಿ ಇಂಜೀನಿಯರ್ ಹರ್ಷ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ದರು.
ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷೆ ರಾಧ ನಾಗರಾಜು ಅವರು ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಉಪಾಧ್ಯಕ್ಷ ಟಿ ನಂದಕುಮಾರ್, ಮುಖ್ಯಾಧಿಕಾರಿ ಪವನ್ ಕುಮಾರ್ ಪಾಲ್ಗೊಂಡಿದ್ದರು.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ.

error: