December 22, 2024

Bhavana Tv

Its Your Channel

ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಮಹಿಳೆಯ ಮಾಂಗಲ್ಯ ಎಗರಿಸಿದ ಕಳ್ಳರು

ಮಳವಳ್ಳಿ : ಹಾಡುಹಗಲೇ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಮಹಿಳೆಯರನ್ನು ಹಿಂಬಾಲಿಸಿ ಬಂದ ಬೈಕ್ ಸವಾರರಿಬ್ಬರು ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಎಗರಿಸಿ ಪರಾರಿಯಾಗಿರುವ ಆಘಾತಕಾರಿ ಘಟನೆ ಮಳವಳ್ಳಿ ಹೊರವಲಯದ ಮುಟ್ಟನಹಳ್ಳಿ ರಸ್ತೆಯ ಕಣಿಗಲ್ ಹಳ್ಳದ ಬಳಿ ಜರುಗಿದೆ.
ತಾಲೂಕಿನ ಶಿರಮಹಳ್ಳಿ ಗ್ರಾಮದ ಮೇಘರಾಜ್ ಎಂಬುವರ ಪತ್ನಿಯಾದ ಅಶ್ವಿನಿ ಸರ ಕಳೆದುಕೊಂಡ ಮಹಿಳೆಯಾಗಿದ್ದು ನೆನ್ನೆ ಸಾಯಂಕಾಲ ೪.೪೦ ರ ಸಮಯದಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ಸಾಮಾನು ತರಲೆಂದು ತಮ್ಮ ಸಂಬAಧಿ ಸುಷ್ಮಾ ಅವರ ಜೊತೆ ಸ್ಕೂಟರ್ ನಲ್ಲಿ ಬರುತ್ತಿದ್ದಾಗ ಈ ದುರ್ಘಟನೆ ಜರುಗಿದೆ.
ಹಿಂದಿನಿAದ ಪಲ್ಸರ್ ಬೈಕ್ ನಲ್ಲಿ ಹಿಂಬಾಲಿಸಿಕೊAಡು ಬಂದ ಇಬ್ಬರು ಯುವಕರು ಸ್ಕೂಟರ್‌ನ ಹಿಂಭಾಗದಲ್ಲಿ ಕುಳಿತಿದ್ದ ಅಶ್ವಿನಿ ಅವರ ಕುತ್ತಿಗೆಗೆ ಕೈ ಹಾಕಿ ಕತ್ತಿನಲ್ಲಿದ್ದ ೬೦ ಗ್ರಾಂ ತೂಕದ ಸುಮಾರು ೨ ಲಕ್ಷ ರೂ ಮೌಲ್ಯದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿ ದ್ದಾರೆ.
ಸರ ಕಿತ್ತ ರಭಸದಿಂದ ಆಯಾ ತಪ್ಪಿ ಕೆಳಗೆ ಬಿದ್ದ ಮಹಿಳೆಯರು ಗಾಯಗೊಂಡಿದ್ದು ಈ ಪೈಕಿ ತೀವ್ರವಾಗಿ ಗಾಯಗೊಂಡಿರುವ ಅಶ್ವಿನಿ ಅವರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸುಮಾರು ೨೫ರಿಂದ ೩೦ ವರ್ಷದೊಳಗಿನ ಈ ಇಬ್ಬರು ದುಷ್ಕರ್ಮಿಗಳು ತಲೆಗೆ ಹೆಲ್ಮೆಟ್ ಹಾಕಿದ್ದರೆನ್ನಲಾಗಿದೆ..
ಸ್ಥಳಕ್ಕೆ ಎಸ್ಪಿ ಡಾ. ಅಶ್ವಿನಿ, ಅಡಿಷನಲ್ ಎಸ್ಪಿ ಧನಂಜಯ್, ಡಿವೈಎಸ್ಪಿ ಲಕ್ಷ್ಮಿ ನಾರಾಯಣ ಪ್ರಸಾದ್, ಸರ್ಕಲ್ ಇನ್ಸ್ ಪೆಕ್ಟರ್ ರಾಜೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಕಾರ್ಯ ಕೈಗೊಂಡಿದ್ದಾರೆ.

ವರದಿ: ಮಲ್ಲಿಕಾರ್ಜುನ ಮಳವಳ್ಳಿ

error: