December 22, 2024

Bhavana Tv

Its Your Channel

ಮಳವಳ್ಳಿ ಸಿಟಿ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾಗಿ ಲಯನ್ ಭರತೇಶ್‌ರವರು ಪುನರ್ ಆಯ್ಕೆ

ಮಳವಳ್ಳಿ : ಮಳವಳ್ಳಿ ಸಿಟಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿ ಲಯನ್ ಭರತೇಶ್ ಅವರು ಪುನರ್ ಆಯ್ಕೆಗೊಂಡಿದ್ದಾರೆ.

ಕಾರ್ಯದರ್ಶಿಯಾಗಿ ಎಂ ಸಿ ಬಸವರಾಜು, ಆಡಳಿತಾಧಿಕಾರಿಯಾಗಿ ಸಿದ್ದೇಶ್ , ಖಜಾಂಚಿಯಾಗಿ ವಿರೂಪಾಕ್ಷ ಸೇರಿದಂತೆ ಇತರೆ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಜರುಗಿತು.
ಲಯನ್ಸ್ ಸಂಸ್ಥೆಯ ಮಾಜಿ ರಾಜ್ಯ ಪಾಲರಾದ ಕೆ ದೇವೇಗೌಡ ಸಮಾರಂಭವನ್ನು ಉದ್ಘಾಟಿಸಿ ಸೇವಾ ಮನೋಭಾವದ ಜೊತೆಗೆ ನಾಯಕತ್ವ ಗುಣ ಬೆಳೆಸಿಕೊಳ್ಳಲು ಲಯನ್ಸ್ ಸಂಸ್ಥೆ ಉತ್ತಮ ವೇದಿಕೆ ಎಂದರು.
ಕೆ ಕೃಷ್ಣೇಗೌಡ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿದರು. ಮಳವಳ್ಳಿ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಭರತೇಶ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಸಲಹೆಗಾರ ಕೆ ಎಲ್ ರಾಜಶೇಖರ್, ಜಿಲ್ಲಾ ಅಪರ ಸಂಪುಟ ಕಾರ್ಯದರ್ಶಿ, ಜಿಲ್ಲಾ ಸಂಯೋಜಕ ಸುನಿಲ್ ಕುಮಾರ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಪುರಸಭಾಧ್ಯಕ್ಷೆ ರಾಧ ನಾಗರಾಜು, ಉಪಾಧ್ಯಕ್ಷ ಟಿ ನಂದಕುಮಾರ್, ಸ್ಪೂರ್ತಿ ಡೆವಲಪರ್ಸ್ ನ ಮಾಲೀಕ ಎಂ ಪಿ ಮಧು, ಪರಿಸರ ಪ್ರೇಮಿ ನಾಗರಾಜು, ಗಿಡ ನೆಡು ಮರ ಮಾಡು ಆಂದೋಲನ ಹಾಗೂ ರಕ್ತದಾನ ಶಿಬಿರದ ರುವಾರಿ ಹೆಡ್ ಕಾನ್ಸ್ಟೇಬಲ್ ಆರ್ ಪ್ರಭುಸ್ವಾಮಿ ಅವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕು ಮೊದಲು ಪಟ್ಟಣದ ಎನ್ ಇ ಎಸ್ ಪಾರ್ಕನಲ್ಲಿ ಅತಿಥಿಗಳಿಂದ ಗಿಡ ನೆಡುವ ಕಾರ್ಯಕ್ರಮ ಜರುಗಿತು.

ವರದಿ: ಮಲ್ಲಿಕಾರ್ಜುನಸ್ವಾಮಿ ಮಳವಳ್ಳಿ

error: