December 22, 2024

Bhavana Tv

Its Your Channel

ದಿ. ದೇವರಾಜು ಅರಸುರವರ ೧೦೬ನೇ ಜನ್ಮ ದಿನಾಚರಣೆ

ಮಳವಳ್ಳಿ ; ಮಾಜಿ ಮುಖ್ಯಮಂತ್ರಿ ದಿ. ದೇವರಾಜು ಅರಸ್ ರವರ ೧೦೬ನೇ ಜನ್ಮ ದಿನಾಚರಣೆಯನ್ನು ಮಳವಳ್ಳಿ ಪಟ್ಟಣದ ಪುರಸಭಾ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪುರಸಭಾಧ್ಯಕ್ಷ ದೊಡ್ಡಯ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಪುಟ್ಟಸ್ವಾಮಿ ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡುವುದರ ಜೊತೆಗೆ ಹಾವನೂರು ವರದಿ ಜಾರಿ ಮೂಲಕ ಹಿಂದುಳಿದ ವರ್ಗಗಳಿಗೆ ಮೀಸಲಾತಿ ದೊರಕಿಸುವುದು ಸೇರಿದಂತೆ ಹಲವಾರು ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತಂದ ದೇವರಾಜು ಅರಸ್ ಅವರು ಈ ನಾಡು ಕಂಡ ಅಪ್ರತಿಮ ನಾಯಕ ಎಂದು ಬಣ್ಣಿಸಿದರು.

ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಪುಟ್ಟಸ್ವಾಮಿ, ಮಾಜಿ ಪುರಸಭಾಧ್ಯಕ್ಷ ದೊಡ್ಡಯ್ಯ, ಸದಸ್ಯರಾದ ರವಿ, ಸಿದ್ದರಾಜು, ಪ್ರಶಾಂತ್, ರಾಜಶೇಖರ್, ಜಯಸಿಂಹ, ಮುಖಂಡರಾದ ನಾಗರಾಜು, ಅಂಕನಾಥ್, ರಮೇಶ್, ಮಾರೇಹಳ್ಳಿ ಕಿಟ್ಟಿ, ಕೃಷ್ಣ, ಮತ್ತಿತರರು ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಅರಸು ಅವರ ಜಯಂತಿ ಆಚರಿಸಿದರು.
ಮಲ್ಲಿಕಾರ್ಜುನಸ್ವಾಮಿ ಮಳವಳ್ಳಿ ;

error: