December 20, 2024

Bhavana Tv

Its Your Channel

ಮನೆ ಬಾಗಿಲು ಮುರಿದು ಕಳ್ಳತನ

ಮಳವಳ್ಳಿ : ಮನೆಯೊಂದರ ಹಿಂಭಾಗ ಬಾಗಿಲು ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಹಣ ಸೇರಿದಂತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಕನಕಪುರಸ್ತೆಯ ಪೇಟೆ ಬೀದಿಯ ಎಂ.ಸಿ ಸುನಿಲ್ ಕುಮಾರ್ ಅವರ ಮನೆಯಲ್ಲೇ ಕಳ್ಳತನವಾಗಿದ್ದು,
೪೫ ಗ್ರಾಂ ತೂಕದ ಚಿನ್ನದ ಸರ, ೨೫ ಗ್ರಾಂ ತೂಕದ ಮೂರು ಎಳೆಯ ಚಿನ್ನದ ಸರ, ೩೫ ಗ್ರಾಂ ಒಂದು ಚಿನ್ನದ ಬಳೆ, ೮ ಗ್ರಾಂ ತೂಕದ ಒಂದು ಜೊತೆ ಚಿನ್ನದಬಳೆ, ತಲಾ ೧ ಗ್ರಾಂ ತೂಕದ ೫ ಚಿನ್ನದ ಉಂಗುರಗಳು ಒಟ್ಟು ೧೧೮ ಗ್ರಾಂ ತೂಕದ ನಾಲ್ಕೂವರೆ ಲಕ್ಷ ಮೌಲ್ಯ ದ ಚಿನ್ನಾಭರಣ ವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತಾಯಿ ಚಂದ್ರಮ್ಮ ವಾಕ್ ನಿಂದ ಮನೆಗೆ ಬಂದ ವೇಳೆ ಮನೆ ಒಳಗೆ ಲೈಟ್ ಹಾಕಿದ್ದನ್ನು ಕಂಡು ಗಾಬರಿಯಾಗಿ ಕಿಟಿಕಿಯಲ್ಲಿ ನೋಡಲಾಗಿ ಬೀರುವಿನ ಬಾಗಿಲು ತೆಗೆದು ಕಳ್ಳತನ ಮಾಡುತ್ತಿರುವ ಕಳ್ಳರನ್ನು ಕಂಡು ಕೂಗಿಕೊಂಡಾಗ ಹಿಂಬದಿ ಬಾಗಿಲು ಮೂಲಕ ಹೊರ ಓಡಿಹೋಗಿ ಕಾಂಪೌAಡ್ ನೆಗೆದು ಪರಾರಿಯಾದರು ಎನ್ನಲಾಗಿದೆ.
ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದರು ಸ್ಥಳಕ್ಕೆ ಡಿವೈಎಸ್ ಪಿ ಲಕ್ಷ್ಮಿ ನಾರಾಯಣ ಪ್ರಸಾದ್ , ಸಬ್ ಇನ್ಸ್ ಪೆಕ್ಟರ್ ಹನುಮಂತಕುಮಾರ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನೂ ಈ ಸಂಬAಧ ಮಳವಳ್ಳಿ ಪಟ್ಟಣದ ಪೊಲೀಸಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಕೊಂಡಿದ್ದಾರೆ
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: