December 21, 2024

Bhavana Tv

Its Your Channel

ಪುರಸಭೆಯ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾದ ಪುಟ್ಟಸ್ವಾಮಿಯವರಿಗೆ ಸನ್ಮಾನ

ಮಳವಳ್ಳಿ : ಮಳವಳ್ಳಿ ಪುರಸಭೆಯ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಅಯ್ಕೆಯಾಗಿರುವ ಪುಟ್ಟಸ್ವಾಮಿ ಅವರನ್ನು ನಾಲ್ಕನೇ ವಾರ್ಡಿನ ಮುಖಂಡರೂ ಸಮಾಜ ಸೇವಕರು ಆದ ಎಂ ಪಿ ಶಿವಕುಮಾರ್ ನೇತೃತ್ವದಲ್ಲಿ ಈ ವಾರ್ಡಿನ ಮುಖಂಡರು ಹಾಗೂ ನಾಗರೀಕರು ಹೃದಯ ಸ್ಪರ್ಶಿ ಸನ್ಮಾನ ಮಾಡಿ ಗೌರವಿಸಿದರು.
ಪಟ್ಟಣದ ಎನ್ ಇ ಎಸ್ ಬಡಾವಣೆಯ ಶಿವಕುಮಾರ್ ಅವರ ಕಚೇರಿ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಪುಟ್ಟಸ್ವಾಮಿ ಅವರಿಗೆ ಭಾರಿ ಹಾರ ತುರಾಯಿಗಳ ಜೊತೆಗೆ ಆಕರ್ಷಕ ಪೇಟ ತೊಡಿಸಿ ಸನ್ಮಾನಿಸಲಾಯಿತು.
ವಾರ್ಡಿನ ಜನರ ಪರವಾಗಿ ಸನ್ಮಾನಿಸಿ ಮಾತನಾಡಿದ ಸಮಾಜ ಸೇವಕ ಶಿವಕುಮಾರ್ ಅವರು ಸರಳ ಸಜ್ಜನರೂ ಆದ ಪುಟ್ಟಸ್ವಾಮಿ ಅವರು ಪಕ್ಷೇತರ ಸದಸ್ಯರಾಗಿ ಪುರಸಭೆಗೆ ಆಯ್ಕೆಯಾಗಿ ಎಲ್ಲಾ ಪಕ್ಷದ ಸದಸ್ಯರ ವಿಶ್ವಾಸದೊಂದಿಗೆ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಯಾಗಿರುವುದು ನಮ್ಮ ವಾರ್ಡಿಗೆ ಸಂದ ಗೌರವವಾಗಿದ್ದು ತಮ್ಮ ಅಧಿಕಾರಾವಧಿಯಲ್ಲಿ ವಿಶೇಷವಾಗಿ ೪ನೇ ವಾಡ್೯ ನ ಸರ್ವತೋಮುಖ ಅಭಿವೃದ್ಧಿಯ ಜೊತೆಗೆ ಪಟ್ಟಣದ ಎಲ್ಲಾ ವಾಡ್೯ ಗಳ ಅಭಿವೃದ್ಧಿಗೆ ಶ್ರಮಿಸಲಿ ಎಂದು ಹಾರೈಸಿದರು.
ಮಾಜಿ ಪುರಸಭಾಧ್ಯಕ್ಷ ದೊಡ್ಡಯ್ಯ ಮಾತನಾಡಿ ಕೋವಿಡ್ ಹಿನ್ನೆಲೆಯಲ್ಲಿ ಪುರಸಭೆಗೆ ಅನುದಾನಗಳ ಕೊರತೆ ಇದ್ದರೂ ಸಹ ಎಲ್ಲ ಸದಸ್ಯರ ಬೆಂಬಲ ಸಹಕಾರ ದೊಂದಿಗೆ ಪುಟ್ಟಸ್ವಾಮಿ ಅವರು ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಪುಟ್ಟಸ್ವಾಮಿ ಅವರು ತಮ್ಮ ವಾರ್ಡಿನ ನಾಗರೀಕರು ಸಮಾಜ ಸೇವಕ ಎಂ ಪಿ ಶಿವಕುಮಾರ್ ಅವರ ನೇತೃತ್ವ ದಲ್ಲಿ ತಮಗೆ ನೀಡಿದ ಆತ್ಮೀಯ ಸನ್ಮಾನ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರಲ್ಲದೆ ಪಟ್ಟಣ ಹಾಗೂ ವಿಶೇಷವಾಗಿ ನಾಲ್ಕನೇ ವಾರ್ಡಿನ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಮುಖಂಡರಾದ ಕೃಷ್ಣಮೂರ್ತಿ, ಅಂಕನಾಥ್, ಮಾಜಿ ಉಪಾಧ್ಯಕ್ಷೆ ಶಿವಕುಮಾರಿ, ಕನ್ನಹಳ್ಳಿ ಸುಂದರಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: