December 22, 2024

Bhavana Tv

Its Your Channel

ಸಮಾಜ ಸೇವಕರಾದ ಚಿಕ್ಕಬಾಗಿಲು ವೇದಮೂರ್ತಿ ಹುಟ್ಟುಹಬ್ಬ, ಪೂರಿಗಾಲಿ ವಿವಿಧ ಗ್ರಾಮಗಳ ಯುವಕರ ತಂಡಕ್ಕೆ ಕ್ರೀಡಾ ಸಾಮಗ್ರಿ ವಿತರಣೆ

ವರದಿ:ಮಲ್ಲಿಕಾರ್ಜುನ ಮಳವಳ್ಳಿ

ಮಳವಳ್ಳಿ : ಸಮಾಜ ಸೇವಕರಾದ ಚಿಕ್ಕಬಾಗಿಲು ವೇದಮೂರ್ತಿ ಅವರು ಪೂರಿಗಾಲಿ ಭಾಗದ ವಿವಿಧ ಗ್ರಾಮಗಳ ಯುವಕರ ತಂಡಕ್ಕೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸುವುದರ ಜೊತೆಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.

ತಮ್ಮ ಸ್ವಗ್ರಾಮವಾದ ಚಿಕ್ಕ ಬಾಗಿಲು ಗ್ರಾಮದ ಯುವಕರ ತಂಡಕ್ಕೆ ಷಟಲ್ ಕಾಕ್ ಕ್ರಿಕೆಟ್ ಸಾಮಗ್ರಿಗಳ ಜೊತೆಗೆ ಎಸ್ ಎಸ್ ಎಲ್ ಸಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿದರು.ಇದಲ್ಲದೆ ಬಿ ಜಿ ಪುರ, ಪೂರಿಗಾಲಿ ಗ್ರಾಮದ ಯುವಕರ. ತಂಡಕ್ಕೆ ಸಹ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದರು.
ನಂತರ ಶಿವನಸಮುದ್ರದಲ್ಲಿ ಪತ್ರಕರ್ತರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿ ಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಸಿ ಎಂ ವೇದಮೂರ್ತಿ ತಮ್ಮ ಸಮಾಜ ಮುಖಿ ಸೇವಾ ಕಾರ್ಯಗಳಿಗೆ ಪತ್ರಕರ್ತ ಮಿತ್ರರು ಪ್ರೋತ್ಸಾಹ ನೀಡಿ ಬೆಂಬಲಿಸಬೇಕೆAದು ಕೋರಿದರು.
ಕಾರ್ಯ ನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ವಕ್ಕರಹಳ್ಳಿ ಜಯರಾಜು, ಸಿದ್ದರಾಜು, ಬೆಳಕವಾಡಿ ಉಮೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

error: