December 22, 2024

Bhavana Tv

Its Your Channel

ಮಳೆ, ಗಾಳಿಗೆ ರಸ್ತೆಗೆ ಬಾಗಿದ ಬೃಹತ್ ಮರ

ಮಳವಳ್ಳಿ: ತಾಲ್ಲೂಕಿನ ಮಿಕ್ಕೆರೆ ಗ್ರಾಮದಲ್ಲಿ ಗುರುವಾರ ಸಂಜೆ ಸುರಿದ ಮಳೆ ಗಾಳಿಗೆ ಬೃಹತ್ ಮರವೊಂದು ರಸ್ತೆಗೆ ಬಾಗಿದ್ದು ಅದೃಷ್ಟವಶಾತ್ ಯಾವುದೇ ಅವಘಡ ನಡೆದಿಲ್ಲ.
ಗ್ರಾಮದ ಮುಖ್ಯರಸ್ತೆಯ ಬದಿಯಲ್ಲಿ ಕಳೆದ ಹಲವು ವರ್ಷಗಳಿಂದ ಬೃಹತ್ ಆಲದ ಮರವೊಂದು ಬೆಳೆದು ನಿಂತಿತ್ತು. ಮರ ತೆರವುಗೊಳಿಸಲು ಹಲವು ಬಾರಿ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿದಿನ ಕಿರುಗಾವಲಿಂದ ಈ ರಸ್ತೆಯ ಮಾರ್ಗವಾಗಿ ಹತ್ತಾರು ಸರ್ಕಾರಿ ಮತ್ತು ಖಾಸಗಿ ಬಸ್ ಗಳು ಸೇರಿದಂತೆ ನೂರಾರು ವಾಹನಗಳ ಸಂಚಾರ ನಡೆಸುತ್ತವೆ. ಇದೀಗ ಮಳೆ ಮತ್ತು ಗಾಳಿಗೆ ರಸ್ತೆಗೆ ಬಾಗಿದ್ದು, ಮತ್ತೊಂದು ಮರದಿಂದ ಹಾಗೂ ವಿದ್ಯುತ್ ಕಂಬದಿAದಾಗಿ ಮರ ನೆಲಕ್ಕೆ
ಬಿದ್ದಿಲ್ಲ. ಇದರಿಂದ ದೊಡ್ಡ ಅವಘಡ ತಪ್ಪಿದೆ. ಕೂಡಲೇ ಮರವನ್ನು ತೆರವುಗೊಳಿಸಲು ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವರದಿ:ಮಲ್ಲಿಕಾರ್ಜುನ ಮಳವಳ್ಳಿ

error: