December 22, 2024

Bhavana Tv

Its Your Channel

ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರೆವೇರಿಸಿದ ಶಾಸಕ ಡಾ ಕೆ ಅನ್ನದಾನಿ

ಮಳವಳ್ಳಿ : ತಡ ರಾತ್ರಿಯಲ್ಲಿ ಯುವತಿ ಮತ್ತು ಆಕೆಯ ಸ್ನೇಹಿತ ನಿರ್ಜನ ಪ್ರದೇಶಕ್ಕೆ ಏಕೆ ಹೋಗಬೇಕಿತ್ತು ಎಂದು ಪ್ರಶ್ನಿಸುವ ತಡ ರಾತ್ರಿಯಲ್ಲಿ ಆಕೆ ಆ ಸ್ಥಳಕ್ಕೆ ಹೋಗಿದ್ದೇ ಗ್ಯಾಂಗ್ ರೇಪ್ ನಡೆಯಲು ಕಾರಣ ಎಂಬರ್ಥದಲ್ಲಿ ಮಾತನಾಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿರುವ ಶಾಸಕ ಡಾ ಕೆ ಅನ್ನದಾನಿ ಅವರು ಜವಾಬ್ದಾರಿ ಸ್ಥಾನದಲ್ಲಿ ರುವ ಗೃಹ ಸಚಿವರೇ ಇಂತಹ ಹೇಳಿಕೆ ನೀಡುವುದು ಸಾದುವಲ್ಲ ಎಂದು ಹೇಳಿದರು.
ತಾಲ್ಲೂಕಿನ ನೆಲ್ಲೂರು, ತಳಗವಾದಿ ಚೆನ್ನಪಿಳ್ಳೆ ಕೊಪ್ಪಲು ಗ್ರಾಮಗಳಲ್ಲಿ ರಸ್ತೆ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಹಿಳೆಯರು ಎಷ್ಟು ಹೊತ್ತಿಗೆ ಎಲ್ಲಿಗೆ ಬೇಕಾದರೂ ನಿರ್ಭಯವಾಗಿ ಹೋಗಬಹು ದು ಇದು ಅಂಬೇಡ್ಕರ್ ಅವರ ಸಂವಿಧಾನದ ಆಶಯ ಹಾಗೂ ಗಾಂಧೀಜಿ ಅವರ ಕನಸು ಕೂಡ ಅಂತಹದರಲ್ಲಿ ಗೃಹ ಸಚಿವರೇ ರಾತ್ರಿ ವೇಳೆ ಮಹಿಳೆಯರು ಮನೆಯಿಂದ ಹೊರಬರುವುದೇ ತಪ್ಪು ಎನ್ನುವ ರೀತಿ ಮಾತನಾಡಿ ರುವುದು ತಪ್ಪು ಎಂದರು. ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದ ಆರೋಪಗಳನ್ನು ಪತ್ತೆ ಕೂಡಲೇ ಬಂಧಿಸುವುದರ ಜೊತೆಗೆ ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸ ಬೇಕೆಂದು ಆಗ್ರಹಿಸಿದರು.
ನಮ್ಮಲ್ಲಿ ಬೇಡದ ಕಾನೂನು ಗಳಿಗೆ ತಿದ್ದುಪಡಿ ತರಲಾಗುತ್ತದೆ ಮುಖ್ಯವಾಗಿ ಇಂತಹ ಅತ್ಯಾಚಾರ ಪ್ರಕರಣಲ್ಲಿ ಭಾಗಿಯಾದ ಆರೋಪಗಳಿಗೆ ದುಬೈ ಮಾದರಿಯಲ್ಲಿ ಆರೋಪಿಗಳ ಅಂಗಾAಗ ತೆಗೆದು ಹಾಕುವ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಒಟ್ಟು ೨.೧೨ ಕೋಟಿ ರೂ ವೆಚ್ಚದಲ್ಲಿ ತಾಲ್ಲೂಕಿನ ನೆಲ್ಲೂರು, ತಳಗವಾದಿ, ಚೆನ್ನಪಿಳ್ಳೆ ಕೊಪ್ಪಲು, ದೊಡ್ಡೇಗೌಡನ ಕೊಪ್ಪಲು, ಅಕ್ಕಮ್ಮಲ್ಲನ ಹುಂಡಿ, ಹಣಕೊಳ, ಬಿ ಜಿ ಮೊಳೆ, ರಾವಣಿ ಮುಂತಾದ ಗ್ರಾಮಗಳಲ್ಲಿ ರಸ್ತೆ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಅನ್ನದಾನಿ ಚಾಲನೆ ನೀಡಿದರು.
ಗ್ರಾಮೀಣ ಭಾಗದಲ್ಲಿ ರಸ್ತೆ, ಚರಂಡಿ, ನೀರು ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ನನ್ನ ಆಧ್ಯತೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇಗೌಡ. ಮಾಜಿ ಜಿ ಪಂ ಸದಸ್ಯರಾದ ತಳಗವಾದಿ ಹನುಮಂತು, ಸೇರಿದಂತೆ ಹಲವಾರು ಮುಖಂಡರು ಅಧಿಕಾರಿಗಳ ಹಾಜರಿದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: