December 22, 2024

Bhavana Tv

Its Your Channel

ವಾಟರ್ ಮ್ಯಾನ್ ಗಳ ಬದಲಾವಣೆಯ ವಿಚಾರದ ಕುರಿತು ಬಿಜೆಪಿ ಸದಸ್ಯರಿಂದ ಪುರಸಭೆಯ ಕಚೇರಿ ಮುಂದೆ ಪ್ರತಿಭಟನೆ

ವರದಿ: ಮಲ್ಲಿಕಾರ್ಜುನಸ್ವಾಮಿ ಮಳವಳ್ಳಿ

ಮಳವಳ್ಳಿ : ಪಟ್ಟಣದ ಪುರಸಭೆಯಲ್ಲಿ ವಾಡ್೯ ಗಳಿಗೆ ನೇಮಕ ಗೊಂಡಿರುವ ವಾಟರ್ ಮ್ಯಾನ್ ಗಳನ್ನು ಪದೇ ಪದೇ ಬದಲಾಯಿಸುತ್ತಿರುವುದರ ಜೊತೆಗೆ ವಾಟರ್ ಮ್ಯಾನ್ ಗಳ ಬದಲಾವಣೆ ವಿಚಾರದಲ್ಲಿ ಸಹ ಮೂಗು ತೂರಿಸುತ್ತಿರುವ ಶಾಸಕರ ಕ್ರಮದ ವಿರುದ್ಧ ಪುರಸಭೆಯಲ್ಲಿನ ಬಿಜೆಪಿ ಸದಸ್ಯರು ಹಾಗೂ ಬಿಜೆಪಿ ಮುಖಂಡರು ಪುರಸಭೆಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.
ಪುರಸಭಾ ಸದಸ್ಯರು ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ಎಂ ಸಿ ಕೃಷ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪುರಸಭಾ ಸದಸ್ಯರಾದ ರವಿ ಮುಖಂಡರಾದ ಕೆ ಸಿ ನಾಗೇಗೌಡ, ರಾಜಣ್ಣ, ಮುಂತಾದವರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣ ಅವರು ಪಟ್ಟಣದ ಒಂದನೇ ವಾಡ್೯ ಗೆ ನೇಮಕಗೊಂಡಿದ್ದ ವಾಡರ್ ಮ್ಯಾನ್ ಗಳನ್ನು ಅದೇ ವಾಡ್೯ ನ ಸದಸ್ಯರಾದ ನನಗೆ ಗೊತ್ತಿಲ್ಲದಂತೆ ನಾಲ್ಕು ಭಾರಿ ಬದಲಾಯಿಸಿದ್ದು ಈ ಬಗ್ಗೆ ಪುರಸಭೆಯ ಮುಖ್ಯಾಧಿಕಾರಿ ಗಳನ್ನು ಕೇಳಿದರೆ ಶಾಸಕರ ಸೂಚನೆಯಂತೆ ವಾಟರ್ ಮ್ಯಾನ್ ಗಳನ್ನು ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದ್ದು ವಾಟರ್ ಮ್ಯಾನ್ ವಿಚಾರಕ್ಕೂ ಶಾಸಕರು ಮೂಗು ತೂರಿಸುವು ದಾದರೆ ಪುರಸಭಾ ಸದಸ್ಯರಾಗಿ ನಾವೇಕೆ ಇರಬೇಕು ಎಂದು ಪ್ರಶ್ನಿಸಿದರು.
ಪದೇ ಪದೇ ವಾಟರ್ ಮ್ಯಾನ್ ಗಳ ಬದಲಾವಣೆ ಯಿಂದ ನಮ್ಮ ವಾಡ್೯ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದರ ಜೊತೆಗೆ ಪಟ್ಟಣದ ಹಲವಾರು ವಾಡ್೯ಗಳಲ್ಲಿ ಬೀದಿ ದೀಪಗಳು ಕೆಟ್ಟುಹೋಗಿ ಜನ ಕತ್ತಲಲ್ಲಿ ಓಡಾಡುವಂತಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆ ನಿರತ ಸದಸ್ಯರು ಹಾಗೂ ಮುಖಂಡರನ್ನು ಸಮಾಧಾನ ಪಡಿಸಿದ ಉಪಾಧ್ಯಕ್ಷ ಟಿ ನಂದಕುಮಾರ್ ಮುಖಂಡರಾದ ನಾಗರಾಜು, ಮುಖ್ಯಾಧಿಕಾರಿ ಪವನ್ ಕುಮಾರ್ ಅವರುಗಳು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.
ನAತರ ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಪವನ್ ಕುಮಾರ್ ಅವರು ಶಾಸಕರ ಸೂಚನೆಯಂತೆ ವಾಟರ್ ಮ್ಯಾನ್ ಗಳ ಬದಲಾವಣೆ ಮಾಡಲಾಗಿದೆ ಎಂಬ ಹೇಳಿಕೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ತಕ್ಷಣವೇ ಕುಡಿಯುವ ನೀರು ಬೀದಿ ದೀಪ ವ್ಯವಸ್ಥೆ ಸರಿಪಡಿಸುವುದಾಗಿ ತಿಳಿಸಿದರು.

error: