ಮಳವಳ್ಳಿ : ತಿರುಗಾಡಿಕೊಂಡು ಬರುವುದಾಗಿ ಹೇಳಿ ಮನೆಯಿಂದ ಹೊರ ಹೋದ ವೃದ್ದರೊಬ್ಬರು ನಾಪತ್ತೆಯಾಗಿರುವ ಪ್ರಸಂಗವೊAದು ಮಳವಳ್ಳಿ ಪಟ್ಟಣದಲ್ಲಿ ಜರುಗಿದೆ. ಪಟ್ಟಣದ ರಾವಣಿ ರಸ್ತೆಯಲ್ಲಿನ ದೊಡ್ಡಲಿಂಗಯ್ಯ ಬಡಾವಣೆಯ ವಾಸಿ ಪ್ರೇಮ್ ಕುಮಾರ್ ಎಂಬುವರೇ ಕಾಣೆಯಾಗಿರುವ ವೃದ್ದರಾಗಿದ್ದು ೬೩ ವರ್ಷ ವಯಸ್ಸಿನ ನಿವೃತ್ತ ಶಿಕ್ಷಕರಾದ ಇವರು ಕಳೆದ ೨೮ ರಂದು ಸಾಯಂಕಾಲ ೫.೩೦ ರ ಸಮಯದಲ್ಲಿ ಹೊರಗೆ ಹೋಗಿ ತಿರುಗಾಡಿಕೊಂಡು ಬರುವುದಾಗಿ ಹೇಳಿ ಮನೆಯಿಂದ ಹೋದವರು ಈ ವರೆವಿಗೂ ವಾಪಸ್ಸು ಬಂದಿಲ್ಲ ಎನ್ನಲಾಗಿದೆ.
ಎಲ್ಲಾ ಕಡೆ ಹುಡುಕಿದರೂ ಎಲ್ಲೂ ಸಹ ಇವರ ಸುಳಿವು ಸಿಗದೆ ಗಾಬರಿಗೊಂಡಿರುವ ಇವರ ಪತ್ನಿ ಲಕ್ಷ್ಮಮ್ಮ ಅವರು ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪಟ್ಟಣದ ಪೊಲೀಸರು ನಾಪತ್ತೆಯಾಗಿರುವ ಪ್ರೇಮ್ ಕುಮಾರ್ ಅವರ ಪತ್ತೆ ಕಾರ್ಯ ಕೈಗೊಂಡಿದ್ದಾರೆ.
ವರದಿ: ಮಲ್ಲಿಕಾರ್ಜುನಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ