December 22, 2024

Bhavana Tv

Its Your Channel

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ನಡೆಸುತ್ತಿರುವ ಭ್ರಷ್ಟರೇ, ಪವಿತ್ರವಾದ ರಾಜಕೀಯ ಬಿಟ್ಟು ತೊಲಗಿ, ರಾಜ್ಯವ್ಯಾಪಿ ಅಭಿಯಾನ

ಮಳವಳ್ಳಿ: ರಾಜ್ಯದಲ್ಲಿ ಕಳೆದ ೧೫ ವರ್ಷಗಳಿಂದ ಅತ್ಯಂತ ಕೆಟ್ಟ ಆಡಳಿತ ನಡೆಯುತ್ತಿದ್ದು, ಸರ್ಕಾರಿ ಇಲಾಖೆಗಳಲ್ಲಿ ಲಂಚವಿಲ್ಲದೇ ಯಾವುದೇ ಕೆಲಸಗಳು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಬಳಿ ಬುಧವಾರ ಸಂಜೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ನಡೆಸುತ್ತಿರುವ ಭ್ರಷ್ಟರೇ, ಪವಿತ್ರವಾದ ರಾಜಕೀಯ ಬಿಟ್ಟು ತೊಲಗಿ ರಾಜ್ಯವಾಪಿ ಅಭಿಯಾನದಲ್ಲಿ ಅವರು ಮಾತನಾಡಿದರು.
ಕಂದಾಯ ಇಲಾಖೆಯ ಅಧಿಕಾರಿಗಳು ಸಂಬಳದ ಜತೆಗೆ ಲಂಚವನ್ನು ಪಡೆದು ಜನಸಾಮಾನ್ಯರನ್ನು ಹಿಂಸಿಸುತ್ತಾರೆ. ಪೋಲಿಸ್ ಠಾಣೆಗಳು ರಿಯಲ್ ಎಸ್ಟೇಟ್ ಏಜೆಂಟ್ ಗಳು, ರಾಜಕಾರಣಿಗಳ ಹಾಗೂ ಬಲಾಢ್ಯರ ಪರ ನಿಂತಿವೆ. ಸರ್ಕಾರದ ಯಾವುದೇ ಕಚೇರಿಗೆ ಹೋದರೂ ಲಂಚ ನೀಡದೇ ಕೆಲಸಗಳು ಆಗುವುದಿಲ್ಲ ಎಂದು ಆರೋಪಿಸಿದರು.
ಸಾಕಷ್ಟು ಇಂತಹ ಜಟಿಲ ಸಮಸ್ಯೆಗಳನ್ನು ಬಗೆಹರಿಸಲು ರಾಜಕಾರಣಿಗಳಿಂದ ಮಾತ್ರ ಸಾಧ್ಯ. ಆದರೆ ಜನರ ಹಿತ ಕಾಯುವಂತಹ ನಾಯಕರು ಇಲ್ಲ. ಪ್ರಸ್ತುತ ರಾಜಕೀಯದಲ್ಲಿ ಹಣಬಲ, ತೋಳ್ವಲದಿಂದ ಚುನಾವಣೆಯಲ್ಲಿ ಗೆದ್ದವರೇ ಹೆಚ್ಚು, ಈ ವ್ಯವಸ್ಥೆಯಿಂದ ಪ್ರಜಾಪ್ರಭುತ್ವದ ವ್ಯವಸ್ಥೆ ಹಾಳಾಗಿದೆ. ರಾಜಕೀಯ ವ್ಯವಸ್ಥೆ ಬದಲಾಗಬೇಕು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಪರ್ಯಾಯವಾಗಿ ಸ್ವಚ್ಛ, ಪ್ರಾಮಾಣಿಕ, ಜನಪರವಾಗಿ ಕೆಲಸ ಮಾಡಲು ಕೆಆರ್ ಎಸ್ ಪಕ್ಷ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ನಡೆಯುವ ಎಲ್ಲ ಚುನಾವಣೆಗಳಲ್ಲೂ ನಮ್ಮ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎಸ್.ಲಿಂಗೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್, ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕತಮ್ಮೇಗೌಡ, ಮುಖಂಡರಾದ ಸೋಮಸುಂದರ್, ರಘುಪತಿ ಭಟ್, ಆನಂದ್ ಸೇರಿದಂತೆ ಹಲವರು ಇದ್ದರು
ವರದಿ: ಮಲ್ಲಿಕಾರ್ಜುಣ ಮಳವಳ್ಳಿ

error: