December 22, 2024

Bhavana Tv

Its Your Channel

ಮನೆಯ ಹಿಂಬಾಗಿಲು ಮುರಿದು ಕಳ್ಳತನ ಮಾಡಿದ ಆರೋಪಿಗಳ ಬಂಧನ

ಮಳವಳ್ಳಿ ; ಮನೆಯ ಹಿಂಬಾಗಿಲು ಮುರಿದು ಒಳ ನುಗ್ಗಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿ ಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಪಟ್ಟಣದ ಪೊಲೀಸರು ಯಶಸ್ವಿಯಾಗಿ ದ್ದಾರೆ.
ಬೆಂಗಳೂರಿನ ವಾಸಿಗಳಾದ ಅಕ್ಬರ್ ಹಾಗೂ ಅನ್ವರ್ ಎಂಬುವವರೇ ಬಂಧಿತ ಆರೋಪಿಗಳಾಗಿದ್ದು ಕಳೆದ ೨೨ ರಂದು ರಾತ್ರಿ ೭.೩೦ ರ ಸಮಯದಲ್ಲಿ ಪಟ್ಟಣದ ಕನಕಪುರ ರಸ್ತೆಯ ಸುನಿಲ್ ಎಂಬುವವರ ಮನೆಯ ಹಿಂಬಾಗಿಲು ಮುರಿದು ಒಳ ನುಗ್ಗಿದ ಇವರು ಬೀರುವಿನ ಬಾಗಿಲು ಮುರಿದು ಅಲ್ಲಿದ್ದ ಚಿನ್ನದ ಒಡವೆಗಳನ್ನು ದೋಚಿ ಪರಾರಿಯಾಗಿದ್ದರು ಎನ್ನಲಾಗಿದೆ.
ಸಾಯಂಕಾಲದ ವೇಳೆ ವಾಕಿಂಗ್ ಹೋಗಿದ್ದ ಸುನಿಲ್ ಅವರ ತಾಯಿ ಮನೆಗೆ ಬಂದು ಕಿಟಕಿಯಿಂದ ನೋಡಿ ಮನೆಗೆ ಕಳ್ಳರು ನುಗ್ಗಿರುವುದನ್ನು ಕಂಡು ಜೋರಾಗಿ ಕಿರುಚಿಕೊಳ್ಳುತ್ತಿದ್ದಂತೆ ಮನೆಯ ಹಿಂಬಾಗಿಲ ಮೂಲಕ ಆರೋಪಿಗಳು ಪರಾರಿಯಾಗಿದ್ದರು.
ಹೀಗೆ ಗಾಬರಿಯಲ್ಲಿ ಓಡಿ ಹೋಗುವಾಗ ಅರೋಪಿಗಳು ತಮ್ಮ ಮೊಬೈಲ್‌ನ್ನು ಅಲ್ಲಿಯೇ ಬೀಳಿಸಿ ಹೋಗಿದ್ದು ಇದರ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿರುವ ಸರ್ಕಲ್ ಇನ್ಸ್ ಪೆಕ್ಟರ್ ಎ ಕೆ ರಾಜೇಶ್ ಹಾಗೂ ಸಿಬ್ಬಂದಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಬoಧಿತ ಆರೋಪಗಳನ್ನು ಇಲ್ಲಿನ ಜೆ ಎಂ ಎಫ್ ನ್ಯಾಯಾಲಯದ ನ್ಯಾಯಾ ಧೀಶರ ಮುಂದೆ ಹಾಜರು ಪಡಿಸಲಾಗಿದೆ.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: