December 22, 2024

Bhavana Tv

Its Your Channel

ಕರ್ತವ್ಯ ನಿರತ ನೌಕರನೋರ್ವ ಕಚೇರಿಯಲ್ಲಿ ಸಾವು

ಮಳವಳ್ಳಿ ; ಕರ್ತವ್ಯ ನಿರತ ನೌಕರನೋರ್ವ ಕಚೇರಿಯಲ್ಲೇ ಸಾವನ್ನಪ್ಪಿರುವ ಘಟನೆ ಯೊಂದು ಪಟ್ಟಣದಲ್ಲಿ ಜರುಗಿದೆ.
ಪಟ್ಟಣದ ಹೊರವಲಯದ ಲಿಡ್ಕರ್ ಕಾಲೋನಿ ಪಕ್ಕದಲ್ಲಿ ರುವ ಕೇಂದ್ರೀಯ ರೇಷ್ಮೆ ಮಂಡಳಿ ಕಚೇರಿಯಲ್ಲಿ ತಾಂತ್ರಿಕ ವಿಭಾಗದಲ್ಲಿ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಿದ್ದರಾಜು ಎಂಬುವವರೇ ಮೃತ ಪಟ್ಟ ನೌಕರನಾಗಿದ್ದು ಸುಮಾರು ೫೩ ವರ್ಷ ವಯಸ್ಸಿನ ಇವರು ಪಟ್ಟಣದ ಕೀರ್ತಿ ನಗರ ಬಡಾವಣೆಯ ವಾಸಿಯಾಗಿದ್ದು ಕಳೆದ ೧೦ ವರ್ಷಗಳಿಂದ ರೇಷ್ಮೆ ಕೇಂದ್ರೀಯ ರೇಷ್ಮೆ ಇಲಾಖೆ ಯಲ್ಲಿ ಹೊರಗುತ್ತಿಗೆ ನೌಕರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ಗೊತ್ತಾಗಿದೆ.
ಹೃದಯ ಸಂಬoಧಿ ಕಾಯಿಲೆಯಿಂದ ಬಳಲುತ್ತಿದ್ದ ಇವರು ಕೆಲ ದಿನಗಳ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರೆಂದು ಗೊತ್ತಾಗಿದೆ.
ನೆನ್ನೆ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸಲು ಕರ್ತವ್ಯಕ್ಕೆ ಹಾಜರಾಗಿದ್ದ ಸಿದ್ದರಾಜು ರಾತ್ರಿ ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದು ಬೆಳಗಾದರೂ ಎಚ್ಚರಗೊಳ್ಳದ ಕಾರಣ ಎಬ್ಬಿಸಲು ಬಂದ ಸಿಬ್ಬಂದಿ ಇವರು ಮೃತಪಟ್ಟಿರುವುದನ್ನು ಗಮನಿಸಿ ಮನೆಯವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವೈದ್ಯಕೀಯ ಪರೀಕ್ಷೆ ನಂತರ ಶವವನ್ನು ವಾರಸುದಾರರಿಗೆ ನೀಡಲಾಗಿದೆ.
ಮೃತ ಸಿದ್ದರಾಜು ಪತ್ನಿ ಮೂವರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: