December 19, 2024

Bhavana Tv

Its Your Channel

ಸಚಿವ ಪ್ರಭು ಚವ್ಹಾಣ್ ಕೂಡಲೇ ರಾಜೀನಾಮೆ ನೀಡಬೇಕು – ದಲಿತ ಸಮುದಾಯದ ಬಲಗೈ ಮತ್ತು ಎಡಗೈ ಮುಖಂಡರ ಆಗ್ರಹ

ವರದಿ: ಚಂದ್ರಮೌಳಿ ನಾಗಮಂಗಲ

ಮಳವಳ್ಳಿ; ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯ ವಿರುದ್ದ ಪದೇ ಪದೇ ಹೇಳಿಕೆ ನೀಡುತ್ತಿರುವ ಸಚಿವ ಪ್ರಭು ಚವ್ಹಾಣ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಳವಳ್ಳಿ ತಾಲ್ಲೂಕಿನ ದಲಿತ ಸಮುದಾಯದ ಬಲಗೈ ಮತ್ತು ಎಡಗೈ ಮುಖಂಡರು ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಬಲಗೈ ಮತ್ತು ಎಡಗೈ ಮುಖಂಡರು ಸುದ್ದಿಗೋಷ್ಠಿ ನಡೆಸಿ ಸಚಿವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ದರು.
ಗ್ರಾ.ಪಂ.ಸದಸ್ಯ ನಡಕಲಪುರ ಮಂಜುನಾಥ್ ಮಾತನಾಡಿ, ಮಹಾರಾಷ್ಟ್ರದಿಂದ ವಲಸೆ ಬಂದಿರುವ ಸಚಿವ ಪ್ರಭು ಚವ್ಹಾಣ್ ಅವರು ಮೂಲತಃ ಪರಿಶಿಷ್ಟ ಜಾತಿಯವರೇ ಅಲ್ಲ ಎಂದು ದಾಖಲೆ ಸಹಿತ ಮಾಜಿ ಸಚಿವ ಎಚ್.ಆಂಜನೇಯ ಅವರು ಕೆಲ ವರ್ಷಗಳ ಹಿಂದೆಯೇ ರಾಜ್ಯಪಾಲರಿಗೆ ವರದಿ ನೀಡಿದ್ದು, ತನಿಖೆ ಹಂತದಲ್ಲಿದ್ದಾಗ ಜಿಲ್ಲಾಧಿಕಾರಿ ಗಳು ನೋಟಿಸ್ ಕಾರಿ ಮಾಡಿದ್ದರು. ಆ ಸಂದರ್ಭದಲ್ಲಿ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡ ಪ್ರಭು ಚವ್ಹಾಣ್ ಜಿಲ್ಲಾಧಿಕಾರಿಗಳನ್ನು ಎತ್ತಂಗಡಿ ಮಾಡಿಸಿದ್ದರು ಎಂದು ಆರೋಪಿಸಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೇಲೆ ಗೌರವವೇ ಇಲ್ಲದ ಇವರು ಮೀಸಲಾತಿಯ ಲಾಭ ಪಡೆಯುತ್ತಿರುವುದು ದುರಂತವಾಗಿದೆ. ಸದಾಶಿವ ಆಯೋಗದ ತಿರುಳನ್ನೇ ತಿಳಿಯದ ಇಂತಹ ಅವಿವೇಕಿ ವಲಸಿಗರು ಪ್ರಸ್ತತ ನಕಲಿ ಜಾತಿ ಪ್ರಮಾಣ ಪತ್ರ ಸೃಷ್ಟಿ ಮಾಡಿಕೊಂಡು ಅಧಿಕಾರ ಪಡೆದು ಬಲಗೈ ಮತ್ತು ಎಡಗೈ ಸಮುದಾಯದವರಿಗೆ ಸಿಗುವ ಮೀಸಲಾತಿಯನ್ನು ಪ್ರಭು ಚವ್ಹಾಣ್ ಕಿತ್ತುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಹೂವಿನಕೊಪ್ಪಲು ಪ್ರಸನ್ನ ಕುಮಾರ್ ಮಾತನಾಡಿ, ಸದಾಶಿವ ಆಯೋಗದ ವರದಿಯಂತೆ ಶೇ.೧೫ರಷ್ಟು ಮೀಸಲಾತಿಯಲ್ಲಿ ಹೆಚ್ಚಿನ ಪಾಲು ಪಡೆಯುತ್ತಿರುವ ಬಲಿತ ಸಮಾಜಗಳು ಮೂಲತಃ ಅಸ್ಪೃಶ್ಯತೆಯ ಕರಿನೆರಳಿನಲ್ಲಿ ಬಳಲುತ್ತಿರುವ ಬಲಗೈ ಮತ್ತು ಎಡಗೈ ಸಮುದಾಯಗಳಿಗೆ ಅನ್ಯಾಯ ಮಾಡುತ್ತಾ ಬಂದಿದ್ದು, ಹೀಗಾಗಿ ಬೋವಿ, ಕೊರಮ, ಲಂಬಾಣಿ ಸಮುದಾಯಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ಕೈಬಿಡಬೇಕು. ಸದಾಶಿವ ಆಯೋಗ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಿ ರಾಜ್ಯದಲ್ಲಿ ಒಳ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಯತೀಶ್ ದ್ಯಾವಪಟ್ಟಣ, ಗೋಷ್ಠಿಯಲ್ಲಿ ಸುರೇಶ್ ಹಾಡ್ಲಿ, ಪವನ್, ಮಂಟೀಲಿAಗಯ್ಯ, ಮುತ್ತುರಾಜು, ಕೃಷ್ಣಮೂರ್ತಿ ಶಾಂತಕುಮಾರ್, ರಾಜಣ್ಣ, ಸೋಮಣ್ಣ ಸೇರಿದಂತೆ ಬಲಗೈ ಮತ್ತು ಎಡಗೈ ಸಮುದಾಯದ ಮುಖಂಡರು ಇದ್ದರು.

error: