December 22, 2024

Bhavana Tv

Its Your Channel

ಮಳವಳ್ಳಿ ; ಭಾನುವಾರ ಸುರಿದ ಭಾರಿ ಮಳೆಗೆ ರಸ್ತೆಗಳು ಜಲಾವೃತ

ಮಳವಳ್ಳಿ : ಭಾನುವಾರ ಸಾಯಂಕಾಲ ಸುರಿದ ಭಾರಿ ಮಳೆಯಿಂದಾಗಿ ಮಳವಳ್ಳಿ ಪಟ್ಟಣದ ಪೇಟೆ ವೃತ್ತದ ಎಲ್ಲಾ ರಸ್ತೆಗಳು ಜಲಾವೃತವಾಗಿ ಜನರು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣ ವಾಗಿತ್ತು.
ಸಾಯಂಕಾಲ ೪.೩೦ ಸುಮಾರಿಗೆ ಆರಂಭವಾದ ಮಳೆ ೫.೩೦. ವರೆವಿಗೂ ಎಡೆಬಿಡದೆ ಸುರಿದ ಪರಿಣಾಮವಾಗಿ ಪಟ್ಟಣದ ಪೇಟೆ ವೃತ್ತವನ್ನು ಸೇರುವ ಮೈಸೂರು ರಸ್ತೆ. ಮದ್ದೂರು ರಸ್ತೆ, ಪೇಟೆ ಬೀದಿ ಹಾಗೂ ಕೊಳ್ಳೇಗಾಲ ರಸ್ತೆ ಜಲಾವೃತ ವಾಗಿ ರಸ್ತೆಯುದ್ದಕ್ಕೂ ನೀರು ನಿಂತು ಜನ ಹಾಗೂ ವಾಹನ ಸವಾರರು ಪರದಾಡುವಂತಾಗಿತ್ತು.
ರಸ್ತೆಯೇ ಕಾಣದಂತಾಗಿ ಚಾಲಕರು ವಾಹನಗಳನ್ನು ಓಡಿಸಲು ಪರದಾಡುತ್ತಿದ್ದರೆ ರಸ್ತೆ ಬದಿಯ ತಗ್ಗು ಪ್ರದೇಶದ ಅಂಗಡಿಗಳಿಗೆ ನೀರು ನುಗ್ಗಿದ ಪರಿಣಾಮ ವ್ಯಾಪಾರಿಗಳು ಸಾಕಷ್ಟು ನಷ್ಟ ಅನುಭವಿಸು ವುದರ ಜೊತೆಗೆ ಅಂಗಡಿಯಲ್ಲಿ ನಿಂತಿದ್ದ ನೀರು ಹೊರ ಹಾಕಲು ಬಾರಿ ಕಸರತ್ತು ನಡೆಸಬೇಕಾಯಿತು.
ಇನ್ನೂ ಕಿರಿದಾದ ಚರಂಡಿ ಭರ್ತಿಯಾಗಿ ರಸ್ತೆಯಲ್ಲೇ ಹೊಳೆಯಂತೆ ಹರಿಯುತ್ತಿದ್ದ ನೀರು ತಗ್ಗು ಪ್ರದೇಶವಾದ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಆವರಣಕ್ಕೆ ನುಗ್ಗಿ ದ ಪರಿಣಾಮ ಇಡೀ ಶಾಲಾ ಆವರಣ ಕೆರೆಯಂತಾಗಿ ಹೋಗಿತ್ತು.
ಒಟ್ಟಿನಲ್ಲಿ ನೆನ್ನೆ ಸಾಯಂಕಾಲ ಸುರಿದ ಭಾರಿ ಮಳೆ ಪಟ್ಟಣದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿತು

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: