December 22, 2024

Bhavana Tv

Its Your Channel

ಕುರಿ ಕೊಟ್ಟಿಗೆಗೆ ಬೆಂಕಿ, ೨೦ ಕುರಿಗಳ ಸಜೀಹ ದಹನ

ಮಳವಳ್ಳಿ: ಕುರಿಗಳನ್ನು ಕೂಡಿ ಹಾಕಿದ್ದ ಗುಡಿಸಲಿನ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ೨೦ ಕುರಿಗಳು ಸಜೀವ ದಹನವಾಗಿರುವ ಧಾರುಣ ಘಟನೆ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯ ಮಾಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಈ ಗ್ರಾಮದ ಸಿದ್ದಪ್ಪ ಎಂಬುವರಿಗೆ ಸೇರಿದ ಈ ಕುರಿಗಳನ್ನು ರಾತ್ರಿ ಗುಡಿಸಲಿನ ಕೊಟ್ಟಿಗೆಯಲ್ಲಿ ಕೂಡಿ ಹಾಕಲಾಗಿತ್ತು.
ರಾತ್ರಿ ೧೨ ಗಂಟೆ ಸಮಯದಲ್ಲಿ ಆಕಸ್ಮಿಕವಾಗಿ ಗುಡಿಸಲಿನ ಕೊಟ್ಟಿಗೆ ಭಾಗಕ್ಕೆ ಬೆಂಕಿ ಬಿದ್ದು ಕೊಟ್ಟಿಗೆಯಲ್ಲಿದ್ದ೨೦ ಕುರಿಗಳು ಸಜೀವ ದಹನವಾಗಿವೆ.
ಕುರಿಗಳ ಸಾವಿನಿಂದ ಕಂಗಾಲಾಗಿರುವ ಮಾಲೀಕ ಸಿದ್ದಪ್ಪ ಸೂಕ್ತ ಪರಿಹಾರ ಕೊಡಿಸುವಂತೆ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.
ಈ ಸಂಬAಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ ; ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: