December 22, 2024

Bhavana Tv

Its Your Channel

ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ಸ್ಥಾಪನೆ

ಮಳವಳ್ಳಿ: ರೈತರ ಅಭಿವೃದ್ದಿಗಾಗಿ ನಾಬಾರ್ಡ್ ಬೆಂಗಳೂರು ಮತ್ತು ವಿಕಾಸನ ಸಂಸ್ಥೆ ಮಂಡ್ಯ ಇವರ ಸಹಯೋಗದಲ್ಲಿ ಬಿ.ಜಿಪುರ ರಾಗಿ ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ಸ್ಥಾಪನೆ ಮಾಡಲಾಗಿದ್ದು, ರೈತ ಉತ್ಪಾದಕರ ಸಂಸ್ಥೆಯನ್ನು ಕಟ್ಟಲು ರೈತರು ಷೇರುದಾರರಾಗುವುದರ ಮೂಲಕ ಪ್ರಯೋಜನ ಪಡೆದುಕೊಳ್ಳಬೇಕೆಂದು ಅಧ್ಯಕ್ಷ ಬಿ.ಎಸ್ ಮಹದೇವಯ್ಯ ಮನವಿ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಗಿ ಮತ್ತು ಇತರೆ ಬೆಳೆಗಾರರನ್ನು ಸಂಘಟಿಸಿ ರೈತರು ಬೆಳೆದ ಬೆಳೆಗಳ ಉನ್ನತೀಕರಣಕ್ಕೆ ಮತ್ತು ರಾಸಾಯನಿಕ ಮುಕ್ತ ಸಾವಯವ ರಾಗಿ ಮತ್ತು ಇತರೆ ಬೆಳೆಗಳ ಉತ್ಪಾದನೆಗೆ ಪ್ರೋತ್ಸಾಹಿಸುವುದು, ರಾಗಿ ಬೆಳೆಗಾರರನ್ನು ಸಂಘಟಿಸುವುದು ಮತ್ತು ಪೂರಕ ಮಾಹಿತಿ ಸೌಲಭ್ಯ ಹೊದಗಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದರು.
ಉತ್ತಮ ಗುಣಮಟ್ಟದ ರಾಗಿ ಮತ್ತು ಇತರೆ ಬೆಳೆಗಳ ಸಂಮೃದ್ದಿ ಉತ್ಪಾದನೆಯ ಮೂಲಕ ಬಿ.ಜಿ ಪುರ ಹೋಬಳಿಯ ಪ್ರಮುಖ ಬೆಳೆಗಳಾದ ರಾಗಿ, ಜೋಳದ ಜೊತೆಗೆ ಇತರೆ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಟ್ಟು, ರೈತರಿಗೆ ಅವಶ್ಯಕವಿರುವ ಬಿತ್ತನೆಬೀಜ ರಸಗೊಬ್ಬರ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡುವ ಉದ್ದೇಶವನ್ನು ಹೊಂದಿದೆ, ಎಲ್ಲಾ ಪ್ರಯೋಜನ ಪಡೆಯಲು ರೈತರು ಒಂದುಸಾವಿರ ರೂ ಷೇರು ಹಣ ಮತ್ತು ೧೦೦ ರೂ ಸದಸ್ಯತ್ವ ಶುಲ್ಕವನ್ನು ಪಾವತಿಸಿ ಷೇರುದಾರರಾಗಬೇಕೆಂದು ಕೋರಿದರು.
ಸಿಇಓ ಮದನ್‌ಕುಮಾರ್ ಮಾತನಾಡಿ, ಜಿ.ಜಿಪುರ ವ್ಯಾಪ್ತಿಯ ರೈತರಿಗೆ ಮಾತ್ರ ಸೀಮಿತಗೊಳಿಸಿ ರೈತ ಉತ್ಪಾದಕ ಸಂಸ್ಥೆಯನ್ನು ಆರಂಭಿಸಿದ್ದು, ರೈತರು ಸಂಸ್ಥೆಗೆ ಸೇರುದಾರರಾಗಲು ೧೧೦೦ ಹಣದೊಂದಿಗೆ ಅಭ್ಯರ್ಥಿಯ ಪಾಸ್‌ಪೊರ್ಟ್ ಆಳತೆಗೆ ೩ ಭಾವಚಿತ್ರ, ಆರ್‌ಟಿಸಿ, ರೇಷನ್‌ಕಾರ್ಡ್, ಆಧಾರ್‌ಕಾರ್ಡ್ ದಾಖಲಾತಿಗಳಲ್ಲಿ ಸಲ್ಲಿಸಿ ಷೇರು ಪಡೆಯಬೇಕೆಂದು ತಿಳಿಸಿದರು. ಗೋಷ್ಠಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ಧೇಶಕ ಸುರೇಶ್, ನಿರ್ಧೇಶಕರಾದ ಯತೀಶ್ ದ್ಯಾವಪಟ್ಟಣ, ಶಿವಕುಮಾರ್, ಗುರುಶಾಂತಪ್ಪ, ಲೋಕೇಶ್, ಸಿದ್ದರಾಜು ಸೇರಿದಂತೆ ಇತರರು ಇದ್ದರು

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: