December 22, 2024

Bhavana Tv

Its Your Channel

ಶುದ್ಧ ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ಶಾಸಕ ಡಾ. ಕೆ ಅನ್ನದಾನಿ ಚಾಲನೆ

ಮಳವಳ್ಳಿ ; ಮಳವಳ್ಳಿ ತಾಲೂಕಿನ ೯ ಗ್ರಾಮಗಳ ಮನೆ ಮನೆ ಗಳಿಗೆ ಕೊಳಾಯಿ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ೫ ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಡಾ. ಕೆ ಅನ್ನದಾನಿ ಅವರು ಚಾಲನೆ ನೀಡಿದರು.
ತಾಲೂಕಿನ ಅಣ್ಣಹಳ್ಳಿ, ಅಗಸನಪುರ, ತುರಗನೂರು, ಅಟ್ಟುವನಹಳ್ಳಿ, ಶೆಟ್ಟಹಳ್ಳಿ, ಹುಚ್ಚನದೊಡ್ಡಿ ಗ್ರಾಮಗಳ ಶುದ್ಧ ಕುಡಿಯುವ ನೀರು ಪೂರೈಕೆಯ ಜೆ ಜೆಎಂ ಯೋಜನೆಗೆ ಚಾಲನೆ ನೀಡಿದರು
ಅಣ್ಣಹಳ್ಳಿ ಯಲ್ಲಿ ಯೋಜನೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಸುದ್ದಿ ಗಾರರೊಂದಿಗೆ ಮಾತನಾಡಿದ ಅನ್ನದಾನಿ ಅವರು ಗ್ರಾಮೀಣ ಭಾಗದ ಜನರ ಮನೆ ಬಾಗಿಲಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಈ ಯೋಜನೆ ಹಳ್ಳಿಗಾಡಿನ ಜನರಿಗೆ ವರದಾನವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಜಿ ಪಂ ಸದಸ್ಯ ರವಿ, ಮುಖಂಡರಾದ ಉಮೇಶ್, ಕೃಷ್ಣ, ಯಶೋಧಮ್ಮ ಶಂಕರೇಗೌಡ, ದೊಡ್ಡಮಾದೇ ಗೌಡ , ಮತ್ತಿತರರು ಪಾಲ್ಗೊಂಡಿದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: