ಮಳವಳ್ಳಿ : ಗ್ರಾಮೀಣ ಭಾಗದ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಜಲಜೀವನ್ ಮಿಷನ್ ಯೋಜನೆ ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆ ಯಾಗಿದ್ದು ಆದರೆ ಕೆಲವರು ಇದು ತಮ್ಮದೇ ಯೋಜನೆ ಎಂದು ಬಿಂಬಿಸುತ್ತ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೆಸರೇಳದೆ ಶಾಸಕ ಅನ್ನದಾನಿ ವಿರುದ್ಧ ಹರಿಹಾಯ್ದಿದ್ದಾರೆ.
ಅವರು ಇಂದು ತಾಲೂಕಿನ ಕಿರುಗಾವಲು, ಕಲ್ಕುಣಿ, ಪೂರಿಗಾಲಿ ಗ್ರಾಮಗಳಲ್ಲಿ ಜೆ ಜಿ ಎಂ ಯೋಜನೆ ಕಾಮಗಾರಿಗೆ ಭೂಮಿ ಪೂಜೆ ನಡೆಸಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ ಈ ಯೋಜನೆಗೆ ಕೇಂದ್ರ ಸರ್ಕಾರ ಶೇ ೫೨ರಷ್ಟು ಅನುದಾನ ನೀಡಿದರೆ ರಾಜ್ಯ ಸರ್ಕಾರ ಶೇ ೩೫ ಮಾತ್ರ ಅನುದಾನ ನೀಡುತ್ತಿದ್ದು ಉಳಿದ ಹಣವನ್ನು ೧೫ನೇ ಹಣಕಾಸು ಯೋಜನೆ ಭರಿಸುತ್ತಿದೆ ಎಂದು ವಿವರಿಸಿದ ಸಂಸದರು ಆದರೆ ಈ ಯೋಜನೆ ತಾವೇ ತಂದವರAತೆ ಜನರ ಮುಂದೆ ಬಿಂಬಿಸುತ್ತ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಶಾಸಕ ಅನ್ನದಾನಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಚುನಾವಣಾ ಸಂದರ್ಭದಲ್ಲಿ ಯಾವ ಯಾವ ರೀತಿಯಲ್ಲಿ ಕಿರುಕುಳ ನೀಡಿದ ಒಂದು ಪಕ್ಷದ ಗುಂಪು ಚುನಾವಣೆ ನಂತರವು ಈ ವರೆವಿಗೂ ನನಗೆ ಕಿರುಕುಳ ನೀಡುತ್ತ ನನ್ನನ್ನು ಟಾರ್ಗೇಟ್ ಮಾಡುತ್ತಿರುವುದನ್ನು ಜಿಲ್ಲೆಯ ಜನ ಗಮನಿಸುತ್ತಿದ್ದು ಜಿಲ್ಲೆಯ ಜನರ ಆಶೀರ್ವಾದ ಹಾಗೂ ಅಂಬರೀಶ್ ಅವರ ಕೃಪಾಶೀರ್ವಾದ ನನ್ನ ಕುಟುಂಬದ ಮೇಲೆ ಇರುವ ವರೆವಿಗೂ ನಾನು ಇದಕ್ಕೆಲ್ಲ ಹೆದರದೆ ಜಿಲ್ಲೆಯ ಅಭಿವೃದ್ಧಿ ಕಾರ್ಯ ಮುನ್ನಡೆಸುವುದಾಗಿ ತಿಳಿಸಿದರು.
ಕಿರುಗಾವಲು ಗ್ರಾಮದಲ್ಲಿ ೧.೭೩ ಕೋಟಿ, ಕಲ್ಕುಣಿ ಗ್ರಾಮದ ೧.೯೩ ಕೋಟಿ, ಪೂರಿಗಾಲಿ ಗ್ರಾಮದ ೧.೪೩ಕೋಟಿ ವೆಚ್ಚದ ಕಾಮಗಾರಿಗೆ ಇಂದು ಸಂಸದೆ ಸುಮಲತಾ ಅಂಬರೀಶ್ ಚಾಲನೆ ನೀಡಿದರು. ಸಂಸದರು ಪಾಲ್ಗೊಂಡಿದ್ದ ಈ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮವಾದರೂ ಯಾವುದೇ ಅಧಿಕಾರಿಗಳಾಗಲಿ ಪಂಚಾಯ್ತಿ ನೌಕರರು ಸಹ ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ. ಸರಕಾರಿ ನೌಕರರು ತಾವು ಒಂದು ಪಕ್ಷದ ಕಾರ್ಯಕರ್ತರಲ್ಲ ಎನ್ನುವುದನ್ನು ನೆನಪಿಟ್ಟು ಕೊಳ್ಳಬೇಕಾಗಿದೆ,
ವರದಿ ; ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ,
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ