ಮಳವಳ್ಳಿ : ನನ್ನ ರಾಜಕೀಯ ಜೀವನದಲ್ಲಿ ಹೆಚ್ ಡಿ ದೇವೇಗೌಡ ಹೆಚ್ ಡಿ ಕುಮಾರಸ್ವಾಮಿ ಅವರಷ್ಟೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಷ್ಟ ಪಡುವುದಾಗಿ ಶಾಸಕ ಡಾ. ಕೆ ಅನ್ನದಾನಿ ಹೇಳಿದ್ದಾರೆ.
ತಾಲೂಕಿನ ದಡದಪುರ ಗ್ರಾಮದಲ್ಲಿ ಸುಮಾರು ೭೫ ಲಕ್ಷರೂ ವೆಚ್ಚದ ವಿವಿದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಕುರಿ ಕಾಯುವ ಬಡ ಕುಟುಂಬದಲ್ಲಿ ಹುಟ್ಟಿ ನಾಡಿನ ಮುಖ್ಯ ಮಂತ್ರಿ ಪಟ್ಟಕ್ಕೇರಿದ ಸಿದ್ದರಾಮಯ್ಯ ಅವರು ಈ ನಾಡು ಕಂಡ ಅದ್ಬುತ ಛಲಗಾರ ಅಷ್ಟೇ ಅಲ್ಲದೆ ನಾಡಿನ ಬಡ ಹಾಗೂ ಹಿಂದುಳಿದ ವರ್ಗಗಳ ಹೆಮ್ಮೆಯ ನಾಯಕ ಆ ಕಾರಣಕ್ಕೆ ರಾಜ್ಯದ ಹಿಂದುಳಿದ ವರ್ಗ ಅವರ ಬಗ್ಗೆ ವಿಶೇಷ ಪ್ರೀತಿ ಗೌರವ ಬೆಳೆಸಿ ಕೊಂಡಿದ್ದು ನಾನು ಸಹ ಜನತಾದಳ ಕಾಲದಿಂದಲೂ ಅವರ ಒಡನಾಡಿಯಾಗಿದ್ದೆ, ಅವರಿಗೂ ಸಹ ಬಡ ದಲಿತ ಕುಟುಂಬದಿAದ ಬಂದು ಶಾಸಕನಾಗಿರುವ ನನ್ನನ್ನು ಕಂಡರೆ ತುಂಬಾ ಪ್ರೀತಿ, ಹೀಗಾಗಿ ಅಧಿವೇಶನದಲ್ಲಿ ನಾನು ಮಾತನಾಡಲು ಸ್ಪೀಕರ್‌ಗೆ ಹೇಳಿ ಸಮಯ ಕೊಡಿಸುತ್ತಾರೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಹಾಗೂ ತಮ್ಮ ನಡುವಿನ ಸಂಭAಧ ಪ್ರಚುರ ಪಡಿಸುವ ಮೂಲಕ ಸಿದ್ದರಾಮಯ್ಯ ಅವರ ಶಿಷ್ಯ ಎಂದೇ ಬಿಂಬಿತ ವಾಗಿರುವ ಮಾಜಿ ಸಚಿವ ಹಾಗೂ ತಮ್ಮ ರಾಜಕೀಯ ವಿರೋಧಿ ಪಿ ಎಂ ನರೇಂದ್ರ ಸ್ವಾಮಿ ಅವರಿಗೆ ಟಾಂಗ್ ನೀಡುವ ಯತ್ನ ನಡೆಸಿದರು.
ಇದೇ ಸಂದರ್ಭದಲ್ಲಿ ದಡದಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ಜೊತೆಗೆ ೫೫ಲಕ್ಷ ವೆಚ್ಚದ ಜೆ ಜೆ ಎಂ ಯೋಜನೆ, ೧೦ ಲಕ್ಷ ವೆಚ್ಚದ ರಸ್ತೆ ಚರಂಡಿ ನಿರ್ಮಾಣ ಕಾಮಗಾರಿಗೆ ಸಹ ಶಾಸಕ ಡಾ ಕೆ ಅನ್ನದಾನಿ ಚಾಲನೆ ನೀಡಿದರು.
ಮಾಜಿ ಜಿ ಪಂ ಸದಸ್ಯರಾದ ತಳಗವಾದಿ ಹನುಮಂತು, ಮಾಜಿ ತಾ ಪಂ ಸದಸ್ಯ ದೊಡ್ಡಯ್ಯ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇಗೌಡ, ಯುವ ಜೆಡಿಎಸ್ ಅಧ್ಯಕ್ಷ ಚಂದಹಳ್ಳಿ ಶ್ರೀಧರ್ , ಟಿಎಪಿಸಿಎಂಎಸ್ ನಿರ್ಧೇಶಕ ಬುಲೆಟ್ ಲಿಂಗಣ್ಣ, ಮಾಜಿ ಗ್ರಾ ಪಂ ಅಧ್ಯಕ್ಷ ನಾಗರಾಜು, ಮತ್ತಿತರರು ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು.
ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ