December 22, 2024

Bhavana Tv

Its Your Channel

ಗ್ರಾಮಪಂಚಾಯಿತಿ ಆಡಳಿತ ಮಂಡಳಿಯ ಗಮನಕ್ಕೂ ತಾರದೇ ವಾಟರ್ ಟ್ಯಾಂಕ್ ತೆರವುಗೊಳಿಸಿದ ಪಿಡಿಓ, ಗ್ರಾ.ಪಂ ಅಧ್ಯಕ್ಷೆ ಉಮಾ ಆರೋಪ

ಮಳವಳ್ಳಿ: ನೆಲಮಾಕನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಗುಳಘಟ್ಟ ಗ್ರಾಮದಲ್ಲಿ ಕೋಟ್೯ ತಡೆಯಾಜ್ಞೆ ಆದೇಶವಿದ್ದರೂ ಪಿಡಿಓ ಗ್ರಾಮಪಂಚಾಯಿತಿ ಆಡಳಿತ ಮಂಡಳಿಯ ಗಮನಕ್ಕೂ ತಾರದೇ ವಾಟರ್ ಟ್ಯಾಂಕ್ ತೆರವುಗೊಳಿಸಲಾಗಿದೆ ಎಂದು ಗ್ರಾ.ಪಂ ಅಧ್ಯಕ್ಷೆ ಉಮಾ ಆರೋಪಿಸಿದರು.
ನೆಲಮಾಕನಹಳ್ಳಿ ಗ್ರಾ.ಪಂನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಳ್ಳಘಟ್ಟ ಗ್ರಾಮದಲ್ಲಿ ಸಣ್ಣೇಗೌಡರು ನಿರ್ಮಿಸಿ ಕೊಂಡಿರುವ ನೀರಿನ ಟ್ಯಾಂಕ್ ತೆರವುಗೊಳಿಸುವ ಬಗ್ಗೆ ಅಧ್ಯಕ್ಷರು ಸೇರಿದಂತೆ ಸದಸ್ಯರ ಗಮನಕ್ಕೂ ಬಾರದೇ ಏಕಾಏಕಿ ನಿರ್ಧಾರ ಕೈಗೊಂಡಿರುವುದು ಅಧ್ಯಕ್ಷರು ಮತ್ತು ಸದಸ್ಯರಿಗೆ ಮಾಡಿದ ಅಪಮಾನವಾಗಿದೆ ಎಂದರು,
ಗ್ರಾ.ಪಂ ಆಡಳಿತ ಮಂಡಳಿಗೆ ಅಗೌರವ ತೋರಿರುವ ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೇ ಪ್ರತಿಭಟನೆಯನ್ನು ನಡೆಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್ ಮಾತನಾಡಿ, ಗುಳಘಟ್ಟ ಒತ್ತುವರಿ ವಿಷಯವಾಗಿ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಬೇಕಿತ್ತು, ಆದರೇ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಅಧ್ಯಕ್ಷರಿಗೆ ಹಾಗೂ ಸದಸ್ಯರ ಗಮನಕ್ಕೆ ತರದೇ ಏಕಾ ಏಕಿ ತೆರವು ಕಾರ್ಯಚರಣೆಗೆ ಮುಂದಾಗಿದ್ದಾರೆ. ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರಿಗೆ ಗೌರವ ನೀಡದ ಪಿಡಿಓ ವಿರುದ್ದ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಕಾಗೋಷ್ಠಿಯಲ್ಲಿ ಗ್ರಾ.ಪಂ ಸದಸ್ಯರಾದ ಜಯರತ್ನ, ಶಿವರಾಮು, ನಾಗಪ್ಪ, ಅಂದಾನಿಗೌಡ ವರಲಕ್ಷ್ಮಿ ಸೇರಿದಂತೆ ಇತರರು ಇದ್ದರು,

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: