ಮಳವಳ್ಳಿ : ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಅಕ್ಟೋಬರ್ ೩ ರಂದು ಹೋರಾಟ ನಿರತ ರೈತರ ಮೇಲೆ ಕೇಂದ್ರ ಮಂತ್ರಿ ಅಜಯ್ ಮಿಶ್ರರವರ ಮಗ ಆಶಿಸ್ ಮಿಶ್ರ ಮತ್ತು ಆತನ ಗುಂಡಾ ಪಡೆ ವಾಹನ ಹರಿಸಿ ಐದು ಮಂದಿ ರೈತರ ಕೊಲೆ ಮಾಡಲಾದ ಘಟನೆಯಲ್ಲಿ ಹುತಾತ್ಮ ರೈತರಿಗೆ ಮಳವಳ್ಳಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು
ಶ್ರದ್ಧಾಂಜಲಿ ಕಾರ್ಯಕ್ರಮವನ್ನ ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಎನ್ ಎಲ್ ಭರತ್ ರಾಜ್ ಮಾತನಾಡುತ್ತ ಜನ ವಿರೋಧಿ ಕೃಷಿ ಮಸೂದೆಗಳನ್ನ ರದ್ದು ಪಡಿಸಬೇಕೆಂದು ಒತ್ತಾಯಿಸಿ ದೆಹಲಿ ಗಡಿಯಲ್ಲಿ ಕಳೆದ ಹತ್ತು ತಿಂಗಳಿAದ ಹೋರಾಟ ನಡೆಯುತ್ತಿದೆ . ಸಂಯುಕ್ತ ಕಿಸಾನ್ ಮೊರ್ಚಾ ಕರೆಯ ಭಾಗವಾಗಿ ಪಂಜಾಬ್ ಹರಿಯಾಣ ಉತ್ತರ ಪ್ರದೇಶ ಹಲವು ರಾಜ್ಯಗಳಲ್ಲಿ ಬಿಜೆಪಿ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಅದರಂತೆ ಉತ್ತರ ಪ್ರದೇಶ ಉಪ ಮುಖ್ಯ ಮಂತ್ರಿ ಕೇಶವ ಶರ್ಮ ನ ಕಾರ್ಯಕ್ರಮದ ವಿರುದ್ದ ಪ್ರತಿಭಟನೆ ಮಾಡಲು ಅಣಿಯಾಗಿದ್ದ ಜನರ ಮೇಲೆ ಕಾರು ಹತ್ತಿಸಿ ಐದು ಮಂದಿಯನ್ನ ಕೊಲೆ ಮಾಡಿದ ಅಶಿಸ್ ಮಿಶ್ರ ಮತ್ತು ಗುಂಡಾಪಡೆಗೆ ಉಗ್ರ ಶಿಕ್ಷೆ ನೀಡಬೇಕು ಆತನ ತಂದೆ ಅಜಯ್ ಮಿಶ್ರರನ್ನ ಸಂಪುಟ ದಿಂದ ವಜಾ ಮಾಡಬೇಕು ಹುತಾತ್ಮ ರೈತರಿಗೆ ತಲಾ ಒಂದು ಕೋಟಿ ಪರಿಹಾರ ನೀಡಬೇಕು.. ಕೃಷಿ ಕಾಯ್ದೆ ರದ್ದು ಮಾಡಬೇಕೆಂದು ಒತ್ತಾಯಿಸಿದರು
. ಈ ಸಂದರ್ಭದಲ್ಲಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಅದ್ಯಕ್ಷರಾದ ದೇವಿ. ಸುಶೀಲಾ. ಸಿಐಟಿಯು ರಾಜ್ಯ ಮುಖಂಡರಾದ ಜಿ.ರಾಮಕೃಷ್ಣ ಗೌರಮ್ಮ ಕೃಷ್ಣ. ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಲಿಂಗರಾಜಮೂರ್ತಿ ಚಿಕ್ಕಸ್ವಾಮಿ. ರಮೇಶ್ ಮುಂತಾದವರು ಭಾಗವಹಿಸಿದ್ದರು.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ