December 22, 2024

Bhavana Tv

Its Your Channel

ಚಿಂತಕ, ನಟ ಪ್ರೊ.ಜಿ.ಕೆ. ಗೋವಿಂದರಾವ್‌ರವರಿಗೆ ಶ್ರದ್ಧಾಂಜಲಿ

ಮಳವಳ್ಳಿ : ಪ್ರೊ.ಜಿ.ಕೆ.ಗೋವಿಂದರಾವ್ ಅವರ ನಿಧನ ರಂಗ ಸಮುದಾಯ ಮತ್ತು ಸಾಮಾಜಿಕ ಜನ ಚಳವಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಮಂಡ್ಯ ಪಿಇಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜಿ.ಟಿ.ವೀರಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ವಿಶ್ವಮಾನವ ವೇದಿಕೆಯ ಕಚೇರಿಯಲ್ಲಿ ನಡೆದ ಚಿಂತಕ, ನಟ ಪ್ರೊ.ಜಿ.ಕೆ. ಗೋವಿಂದರಾವ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಅವರ ಸಿಡಿಗುಂಡಿನAತಹ ಮಾತುಗಳು. ಕೋಮು ದ್ವೇಷದ ಹರಡುವಿಕೆಯನ್ನು ತಡೆಗಟ್ಟಲು ತಮ್ಮ ಇಳಿವಯಸ್ಸಿನಲ್ಲೂ ಸಾಕಷ್ಟು ಕಡೆಗಳಲ್ಲಿ ಸಿನಿಮಾ, ಟಿವಿ ನಟನೆಯ ಬಿಡುವಿಲ್ಲದ ಸಮಯದಲ್ಲೂ ಕೂಡಾ ಹೋರಾಟಗಳನ್ನು ಭಾಗವಹಿಸುವ ಮೂಲಕ ಜನಪರ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದರು. ಒಬ್ಬ ರಂಗಕರ್ಮಿಯಾಗಿ ನಾಟಕಗಳನ್ನು ಅತೀವ ಪ್ರೀತಿಸುತ್ತಿದ್ದ ಜಿ.ಕೆ.ಗೋವಿಂದರಾವ್ ನಾಟಕಗಳು ಜನರ ನಡುವೆ ಸೇತುವೆಯಾಗಬೇಕು ಎನ್ನುವ ರೀತಿಯಲ್ಲಿ ಭಾವನೆ ವ್ಯಕ್ತಪಡಿಸುತ್ತಿದರು ಎಂದರು.
ನೇರ ನುಡಿಗೆ ಹೆಸರು ವಾಸಿಯಾಗಿದ್ದ ಜಿ.ಕೆ.ಗೋವಿಂದರಾವ್ ಅವರು, ಈಶ್ವರ ಅಲ್ಲಾ ಎಂಬ ಕಿರು ಕಾದಂಬರಿ, ಶೇಕ್ಸ್ ಪೀಯರ್ ನಾಟಕ ಅಧ್ಯಯನ, ಶೇಕ್ಸ್ ಪೀಯರ್ ಸಂವಾದ ಲೇಖನ ಮಾಲಿಕೆ, ನಡೆ ನುಡಿ ನಾಗರಿಕತೆ, ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರೀಯೆ ಪ್ರತಿಕ್ರಿಯೆ, ಮನು ವರ್ಸಸ್ ಅಂಬೇಡ್ಕರ್ ಮುಂತಾದ ಹಲವು ಕೃತಿಗಳು ಹಾಗೂ ನಾಟಕಗಳನ್ನು ಬರೆದಿದ್ದು, ಅವರ ನಡೆ ಅವರಿಗೆ ಸ್ಪೂರ್ತಿಯಾಗಿವೆ ಎಂದರು.
ವಿಶ್ವಮಾನವ ವಿಚಾರ ವೇದಿಕೆಯ ಅಧ್ಯಕ್ಷ ಮ.ಸಿ.ನಾರಾಯಣ, ವಿಶ್ವಗುರು ಕೋ.ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಕೃಷ್ಣಶೆಟ್ಟಿ, ಜಿಲ್ಲಾ ಕಸಾಪದ ಅಧ್ಯಕ್ಷ ಸ್ಥಾನದ ಸ್ಪರ್ಧಿ ಕೃಷ್ಣಸ್ವರ್ಣಸಂದ್ರ, ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎಲ್.ಭರತ್ ರಾಜ್, ಮುಖಂಡರಾದ ಕೃಷ್ಣೇಗೌಡ, ನಂಜುAಡಸ್ವಾಮಿ, ಯೋಗ ಗುರು ಮಲ್ಲಿಕಾರ್ಜುನಸ್ವಾಮಿ ಸೇರಿದಂತೆ ಹಲವರು ಇದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: