ಮಳವಳ್ಳಿ: ಕನ್ನಡ ಸಾಹಿತ್ಯ ಪರಿಷತ್‌ನ ಪ್ರತಿಯೊಬ್ಬ ಮತದಾರರು ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತನ್ನು ಗಟ್ಟಿಗೊಳಿಸಲು ಮುಂದಾಗಬೇಕು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ಮನವಿ ಮಾಡಿದರು.
ಪಟ್ಟಣದ ವಿಶ್ವಮಾನವ ವಿಚಾರ ವೇದಿಕೆಯ ಕಚೇರಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕೃಷ್ಣಸ್ವರ್ಣಸಂದ್ರ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ೧೪ ಸಾವಿರ ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. ಮದ್ದೂರಿನಲ್ಲಿ ೫ ಸಾವಿರ ನಂತರದ ಸ್ಥಾನದಲ್ಲಿ ಮಳವಳ್ಳಿ ತಾಲ್ಲೂಕು ಇದೆ. ಈ ಬಾರಿ ಎಲ್ಲ ಸದಸ್ಯರು ಮತದಾನ ಮಾಡಬೇಕು. ಬಹುಮುಖ ಪ್ರತಿಭೆಯುಳ್ಳ ನಿಜವಾದ ಸಾಹಿತ್ಯ ಕೃಷಿಕ ಕೃಷ್ಣ ಸ್ವರ್ಣಸಂದ್ರ ಅವರಿಗೆ ಬೆಂಬಲ ನೀಡಬೇಕು. ಕನ್ನಡ ಭಾಷೆಯ ಬೆಳವಣಿಗೆಗೆ ಮೂಲಕ ಕನ್ನಡ ಸಾಹಿತ್ಯ ಪರಿಷತ್ ನನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎಂದರು.
ಓಮ್ಮೆ ಆಯ್ಕೆಯಾದವರು ಮತ್ತೊಮ್ಮೆ ಸ್ಪರ್ಧಿಸದಂತೆ ಕಸಾಪದಲ್ಲಿ ಅಲಿಖಿತ ನಿಯಮವಿದ್ದು, ಆದರೆ ಕೆಲವರು ಅದನ್ನು ಮೀರಿ ಚುನಾವಣೆಗೆ ನಿಂತಿದ್ದಾರೆ. ಜಿಲ್ಲೆಯ ಕೆಲ ಸಾಹಿತ್ಯಗಳು, ಹಿರಿಯರು ಸಭೆ ನಡೆಸಿ ಒಮ್ಮತದ ಅಭ್ಯರ್ಥಿಯಾಗಿ ಕೃಷ್ಣ ಸರ್ಣಸಂದ್ರ ಅವರನ್ನು ಆಯ್ಕೆಮಾಡಿದ್ದು, ಕಳೆದ ಬಾರಿ ಸೋತಿದ್ದ ಅವರ ಗೆಲುವಿಗೆ ಎಲ್ಲ ಸದಸ್ಯರು ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ಕಸಾಪದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ.ಮುದ್ದೇಗೌಡ, ಜಿಲ್ಲಾ ಕಸಾಪದ ಅಧ್ಯಕ್ಷ ಸ್ಥಾನದ ಅಭ್ಯಥರ್ ಎಂ.ಕೃಷ್ಣ ಸ್ವರ್ಣಸಂದ್ರ, ವಿಶ್ವಮಾನವ ವಿಚಾರ ವೇದಿಕೆಯ ಅಧ್ಯಕ್ಷ ಮ.ಸಿ.ನಾರಾಯಣ, ಪ್ರಧಾನ ಕಾರ್ಯದರ್ಶಿಜನನ ಎನ್.ಎಲ್.ಭರತ್ ರಾಜ್, ಕಾರ್ಯದರ್ಶಿ ನಾಗೇಶ್, ಯೋಗಗುರು ಮಲ್ಲಿಕಾರ್ಜುನಸ್ವಾಮಿ ಇದ್ದರು
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ