December 22, 2024

Bhavana Tv

Its Your Channel

ಬಂಡೂರು ವಿಶೇಷ ತಳಿಯ ಟಗರು ೧ ಲಕ್ಷದ ೯೧ ಸಾವಿರ ರೂ ಗಳಿಗೆ ಮಾರಾಟ

ಮಳವಳ್ಳಿ : ಸಾಮಾನ್ಯವಾಗಿ ಒಂದು ಕುರಿ ಟಗರಿನ ಬೆಲೆ ೨೦ ರಿಂದ ೩೦ ಸಾವಿರ, ಅದರಲ್ಲೂ ಉತ್ತಮ ತಳಿಯ ಕುರಿ ಟಗರಿಗೆ ೪೦ರಿಂದ ೫೦ ಸಾವಿರ ರೂ ವರೆಗೂ ಮಾರಾಟವಾಗ ಬಹುದೇನೊ, ಆದರೆ ಇಲ್ಲೊಂದು ಟಗರು ೧ ಲಕ್ಷದ ೯೧ ಸಾವಿರಕ್ಕೆ ಮಾರಾಟ ವಾಗುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ.

ಮಳವಳ್ಳಿ ತಾಲ್ಲೂಕಿನ ದೇವಿಪುರ ಗ್ರಾಮದ ಸಣ್ಣಯ್ಯ ಅವರು ಸಾಕಿದ್ದ ಈ ಬಂಡೂರು ವಿಶೇಷ ತಳಿಯ ಟಗರು ೧ ಲಕ್ಷದ ೯೧ ಸಾವಿರ ರೂ ಗಳಿಗೆ ಮಾರಾಟವಾಗಿ ಒಂದು ಹೊಸ ದಾಖಲೆಯನ್ನು ನಿರ್ಮಿಸಿದೆ.
ಸುಮಾರು ಎರಡು ವರ್ಷದ ಹಿಂದೆ ಒಂದು ಲಕ್ಷದ ಐದು ಸಾವಿರ ರೂ ಗಳಿಗೆ ಈ ಟಗರನ್ನು ಖರೀದಿಸಿದ್ದು ಅತ್ಯುತ್ತಮ ಗುಣಮಟ್ಟದ ಮಾಂಸದ ಜೊತೆಗೆ ಭಾರಿ ಜನಪ್ರಿಯವಾಗಿರುವ ಈ ಬಂಡೂರು ತಳಿಯ ಮರಿಗಳು ೪೦ರಿಂದ ೫೦ ಸಾವಿರಕ್ಕೆ ಮಾರಾಟವಾಗುತ್ತಿವೆ ಈ ಕಾರಣ ದಿಂದಲೇ ತಳಿ ಅಭಿವೃದ್ಧಿ ಗಾಗಿಯೇ ಈ ಟಗರನ್ನು ಅಷ್ಟು ಬೆಲೆ ಕೊಟ್ಟು ಖರೀದಿಸಿದ್ದೆ ಎನ್ನುತ್ತಾರೆ.
ಕಳೆದ ಎರಡು ವರ್ಷಗಳಲ್ಲಿ ನಮ್ಮ ಎಲ್ಲಾ ಕುರಿಗಳಿಗೆ ಈ ಟಗರಿನ ತಳಿಯನ್ನೇ ಕ್ರಾಸ್ ಬ್ರೀಡ್ ಮಾಡಿದ್ದು ಈ ವರೆಗೆ ಇದರ ತಳಿಯ ೪೦ರಿಂದ ೫೦ ಮರಿಗಳು ಜನಿಸಿದ್ದು ಅವೆಲ್ಲವೂ ಮಾರಾಟವಾಗಿದ್ದು ಇದರಿಂದ ಸುಮಾರು ೨೫ರಿಂದ ೩೦ ಲಕ್ಷ ಆದಾಯ ಗಳಿಸಿದ್ದೇನೆ ಎನ್ನುತ್ತಾರೆ ಸಣ್ಣಯ್ಯ.
ಇದೀಗ ನಮ್ಮ ಆತ್ಮೀಯರೊಬ್ಬರು ಈ ತಳಿಯ ಟಗರನ್ನು ನಮಗೊಂದು ಕೊಡಿ, ನಮ್ಮ ಭಾಗದಲ್ಲೂ ಈ ತಳಿಯನ್ನು ಕ್ರಾಸ್ ಬ್ರೀಡ್ ಮೂಲಕ ಅಭಿವೃದ್ಧಿ ಪಡಿಸುತ್ತೇವೆ ಎಂದು ಕೇಳಿ ಕೊಂಡ ಮೇರೆಗೆ ಈ ಟಗರನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದರು.
ಇಷ್ಟು ದುಬಾರಿ ಬೆಲೆಗೆ ಈ ಟಗರನ್ನು ಖರೀದಿಸಿರುವ ಮದ್ದೂರು ತಾಲ್ಲೂಕು ಕೊಪ್ಪ ಹೋಬಳಿಗೆ ಸೇರಿದ ಬಿದರ ಕೋಟೆ ಗ್ರಾಮದ ವಾಸಿ ಕಾಂತರಾಜು ಅವರು ಬಂಡೂರು ತಳಿ ಅಪರೂಪ ವಾದ ಭಾರಿ ಜನಪ್ರಿಯತೆ ಪಡೆದಿರುವ ಭಾರಿ ಬೇಡಿಕೆಯ ತಳಿಯಾಗಿದ್ದು ನಮ್ಮ ಭಾಗದಲ್ಲೂ ಈ ತಳಿಯನ್ನು ಅಭಿವೃದ್ದಿ ಪಡಿಸುವ ಉದ್ದೇಶ ದಿಂದ ಈ ಟಗರನ್ನು ಇಷ್ಟು ದುಬಾರಿ ಬೆಲೆಗೆ ಖರೀದಿಸಿದ್ದೇನೆ ಎಂದರು.
ಈ ತಳಿಯ ಒಂದೊAದು ಸಣ್ಣ ಮರಿಯೂ ಸಹ ೩೦ರಿಂದ ೪೦ ಸಾವಿರಕ್ಕೆ ಮಾರಾಟವಾಗುವುದ ರಿಂದ ಬಂಡವಾಳಕ್ಕೆ ತಕ್ಕಂತೆ ಲಾಭ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದರು.
ದಾಖಲೆಯ ಬೆಲೆಗೆ ಮಾರಾಟ ವಾದ ಈ ಟಗರನ್ನು ಸಣ್ಣಪ್ಪ ನವರ ಮನೆಯಿಂದ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ತಮಟೆ ನಗಾರಿಗಳೊಂದಿಗೆ ಅದ್ದೂರಿ ಮೆರವಣಿಗೆ ಮಾಡಲಾಯಿತು.
ನೂರಾರು ಮಂದಿ ಗ್ರಾಮಸ್ಥರು ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು, ಜೊತೆಗೆ ಈ ಅಪರೂಪದ ತಳಿಯನ್ನು ಸಾಕಿ ಅದನ್ನು ದಾಖಲೆಯ ಬೆಲೆಗೆ ಮಾರಾಟ ಮಾಡಿದ ಸಣ್ಣಪ್ಪ ಅವರಿಗೆ ಮಾರ್ಗದುದ್ದಕ್ಕೂ ಹಾರ ತುರಾಯಿಗಳ ಮಾಹಾ ಪೂರವೇ ಹರಿದು ಬಂತು.
ನAತರ ಗ್ರಾಮದ ಹಿರಿಯಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಟಗರನ್ನು ಬೀಳ್ಕೊಡಲಾಯಿತು.

error: