December 21, 2024

Bhavana Tv

Its Your Channel

ಮಳವಳ್ಳಿ; ಸಾರಿಗೆ ಸಂಸ್ಥೆ ಮಾಲೀಕ ಎಂ ಸಿ ವೆಂಕಟೇಶ್ ಮೂರ್ತಿ ನಿಧನ

ಮಳವಳ್ಳಿ : ಮಾಜಿ ಕೇಂದ್ರ ಸಚಿವ ದಿವಂಗತ ಎಂ ವಿ ಚಂದ್ರ ಶೇಖರಮೂರ್ತಿ ಅವರ ಪುತ್ರ ಹಾಗೂ ಉದಯರಂಗ ಸಾರಿಗೆ ಸಂಸ್ಥೆಯ ಸಂಸ್ಥಾಪಕರಾದ ವಿಧಾನ ಪರಿಷತ್ ನ ಮಾಜಿ ಸದಸ್ಯರಾದ ದಿವಂಗತ ಎಂ ವಿ ವೆಂಕಟಪ್ಪ ಅವರ ಮೊಮ್ಮಗನಾದ ಎಂ ಸಿ ವೆಂಕಟೇಶ್ ಮೂರ್ತಿ ಅವರು ನೆನ್ನೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
೫೧ ವರ್ಷ ವಯಸ್ಸಿನ ವೆಂಕಟೇಶ್ ಮೂರ್ತಿ ಅಲಿಯಾಸ್ ಬಾಬು ಉದಯರಂಗ ಸಾರಿಗೆ ಸಂಸ್ಥೆ ಮಾಲೀಕರಾಗಿದ್ದು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಗೊತ್ತಾಗಿದೆ.
ಇಂದು ಸಂಜೆ ೪ ಗಂಟೆಗೆ ಮಳವಳ್ಳಿ ಹೊರವಲಯದ ಮಾರೇಹಳ್ಳಿ ಸಮೀಪದ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: