December 21, 2024

Bhavana Tv

Its Your Channel

ಮಳವಳ್ಳಿ; ನಾಳೆ ಪವರ್ ಸ್ಟಾರ್ ಪುನಿತ್ ರಾಜ್‌ಕುಮಾರ್ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವ ನುಡಿ ನಮನ ಕಾರ್ಯಕ್ರಮ

ಮಳವಳ್ಳಿ : ಅಗಲಿದ ಜನಪ್ರಿಯ ನಟ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವ ನುಡಿ ನಮನ ಕಾರ್ಯಕ್ರಮವೊಂದು ನಾಳೆ ಬುಧವಾರ ಮಳವಳ್ಳಿ ಪಟ್ಟಣದಲ್ಲಿ
ಏರ್ಪಾಡಾಗಿದೆ.
ತಾಲೂಕಿನ ಎಲ್ಲಾ ಕನ್ನಡ ಕಲಾಭಿಮಾನಿಗಳು, ಎಲ್ಲಾ ನಟರ ಅಭಿಮಾನಿಗಳ ಸಂಘಟನೆಗಳು, ಎಲ್ಲಾ ಸಮಾಜದ ಮುಖಂಡರು, ಎಲ್ಲಾ ವಾಹನಗಳ ಚಾಲಕರ ಸಂಘದ ಪದಾಧಿಕಾರಿಗಳು ಸೇರಿ ಈ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರಾದ ತಳಗವಾದಿ ಪ್ರಕಾಶ್ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ಬೆಳಿಗ್ಗೆ ೧೦ ಗಂಟೆಗೆ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ಏರ್ಪಾಡಾಗಿರುವ ಈ ಕಾರ್ಯಕ್ರಮ ದಲ್ಲಿ ಕಂಸಾಳೆ ಮಹಾದೇವಸ್ವಾಮಿ ಅವರ ಜಾನಪದ ಗಾಯನದೊಂದಿಗೆ ಆರಂಭವಾಗಲಿದ್ದು ವೇದಿಕೆ ಕಾರ್ಯಕ್ರಮ ೧೧ಗಂಟೆಗೆ ಉದ್ಘಾಟನೆ ಗೊಳ್ಳಲಿದೆ ಎಂದು ತಿಳಿಸಿದರು.
ಬಾಲ ಗಂಗಾಧರನಾಥ ಸ್ವಾಮೀಜಿ ಸಂಸ್ಥಾನದ ಕೊಮ್ಮೇರಹಳ್ಳಿ ಶಾಖಾ ಮಠದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ ಅವರು ಕಾರ್ಯಕ್ರಮ ವನ್ನು ಉದ್ಘಾಟಿಸಲಿದ್ದು ಮಳವಳ್ಳಿ ಸಾಯಿಕೃಷ್ಣ, ಮುನಿ, ಪೊಟ್ರೆ ನಾಗರಾಜು, ಮುರುಳಿ ಮೋಹನ್ ಮುಂತಾದ ಹೆಸರಾಂತ ನಟರು ನಿರ್ದೇಶ ಕರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಂಗವಾಗಿ ಅನ್ನಸಂತರ್ಪಣೆ ಕಾರ್ಯವನ್ನು ಸಹ ಹಮ್ಮಿಕೊಂಡಿದ್ದು ಸಾರ್ವಜನಿಕರು ಪುನಿತ್ ರಾಜ್ ಕುಮಾರ್ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮ ದಲ್ಲಿ ಭಾಗವಹಿಸ ಬೇಕೆಂದು ಪ್ರಕಾಶ್ ಮನವಿ ಮಾಡಿದರು.ಮುಖಂಡರಾದ ಭರತ್ ರಾಜ್ , ಕೃಷ್ಣ , ಶಿವರಾಜ್ ನಾಯಕ್, ಈ ಸಂದರ್ಭದಲ್ಲಿ ಹಾಜರಿದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: