December 22, 2024

Bhavana Tv

Its Your Channel

ಮಳವಳ್ಳಿ ಪಟ್ಟಣದಲ್ಲಿ ಪವರ್ ಸ್ಟಾರ್ ಪುನಿತ್ ರಾಜ್‌ಕುಮಾರ್ ಪುಣ್ಯಸ್ಮರಣೆ ಕಾರ್ಯಕ್ರಮ

ಮಳವಳ್ಳಿ : ಕನ್ನಡ ಚಿತ್ರರಂಗದ ಸುಪ್ರಸಿದ್ಧ ನಟ , ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಹಠಾತ್ ನಿಧನರಾಗಿ ೧೨ ದಿನಗಳು ತುಂಬಿದ ಹಿನ್ನೆಲೆಯಲ್ಲಿ ಮಳವಳ್ಳಿ ಪಟ್ಟಣದಲ್ಲಿ ಅವರ ಅಭಿಮಾನಿಗಳು ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಬೆAಗಳೂರಿನ ಅವರ ಸಮಾಧಿ ಬಳಿ ಅಪ್ಪು ಕುಟುಂಬದವರು ಅವರ ೧೨ನೇ ದಿನದ ಪುಣ್ಯ ಸ್ಮರಣೆ ಕಾರ್ಯ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮಳವಳ್ಳಿ ಪಟ್ಟಣದ ಪೇಟೆ ಬೀದಿಯ ಪುನಿತ್ ರಾಜ್ ಕುಮಾರ್ ಅಭಿಮಾನಿ ಬಳಗದವರು ಸಹ ಅಪ್ಪು ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಪಟ್ಟಣದ ಕನಕಪುರ ರಸ್ತೆಯ ಟೋಲ್ ಗೇಟ್ ಬಳಿಯ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಆಯೋಜಿಸಲಾಗಿದ್ದ ಕಾರ್ಯಕ್ರಮ ದಲ್ಲಿ ಹಲವಾರು ಮುಖಂಡರು ಅಭಿಮಾನಿಗಳು ಪಾಲ್ಗೊಂಡು ಪುನಿತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಜೊತೆಗೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪುರಸಭಾಧ್ಯಕ್ಷ ಎನ್ ನಂಜುAಡಯ್ಯ ಅವರು ಡಾ. ರಾಜ್ ಕುಮಾರ್ ಕುಟುಂಬದ ಅಪ್ರತಿಮ ಪ್ರತಿಭೆಯಾಗಿದ್ದ ಪುನಿತ್ ರಾಜ್ ಕುಮಾರ್ ಅವರು ಅದ್ಬುತ ನಟನೆ ಜೊತೆಗೆ ಅಪಾರ ಪ್ರಮಾಣದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದದು ಅವರ ನಿಧನದ ವರೆಗೂ ಯಾರಿಗೂ ಗೊತ್ತಾಗದಂತೆ ನಡೆಸಿಕೊಂಡು ಬಂದಿರುವುದು ಅವರ ದೊಡ್ಡ ವ್ಯಕ್ತಿತ್ವಕ್ಕೆ ಸಾಕ್ಷಿ ಎಂದರು.
ಕಾರ್ಯಕ್ರಮ ದಲ್ಲಿ ಪುರಸಭಾ ಸದಸ್ಯರಾದ ಜಯಸಿಂಹ, ಮುಖಂಡರಾದ ಪೊತಂಡೆ ನಾಗರಾಜು, ಮಲ್ಲಯ್ಯ, ಕೆ ಸಿ ನಾಗೇಗೌಡ, ಮೆಡಿಕಲ್ ಕುಮಾರ್, ರಮೇಶ್, ಚಿಕ್ಕಮರಿಗೌಡ ಮತ್ತಿತರರು ಪಾಲ್ಗೊಂಡಿದ್ದರು.

ವರದಿ:ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: