ಮಳವಳ್ಳಿ: ಸಾಮಾಜಿಕ ಕಾರ್ಯದಲ್ಲಿ ವರನಟ ಡಾ. ರಾಜ್ಕುಮಾರ್ ಕುಟುಂಬ ಸಮಾಜದಲ್ಲಿ ಮಾದರಿಯಾಗಿದ್ದು, ಪುನೀತ್ರಾಜ್ಕುಮಾರ್ ಅವರ ಆದರ್ಶ ರಾಜ್ಯದ ಜನರಿಗೆ ಸ್ಪೂರ್ತಿದಾಯಕವಾಗಿದೆ ಎಂದು ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತಮಾನಂದ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ವಿವಿಧ ಸಂಘ ಸಂಸ್ಥೆಗಳಿAದ ಆಯೋಜಿಸಲಾಗಿದ್ದ ದಿವಂಗತ ಚಲನಚಿತ್ರ ನಟ ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ ಅವರಿಗೆ ಭಾವಪೂರ್ಣ ನುಡಿ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುನೀತ್ ರಾಜ್ಕುಮಾರ
ಅವರ ಅಗಲಿಕೆಗೆ ರಾಜ್ಯ ಸೇರಿದಂತೆ ವಿವಿಧ ರಾಜ್ಯ ಮತ್ತು ವಿದೇಶಗಳಲ್ಲಿ ಕಂಬನಿ ಮೀಡಿದಿರುವುದು ಪುನೀತ್ ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ತಿಳಿಸಿದರು
ಮಾಜಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಮಾತನಾಡಿ, ಪುನೀತ್ರಾಜ್ಕುಮಾರ್ ತಂದೆಗಿAತಲೂ ಒಂದು ಕೈ ಮೇಲಾಗಿ ಸಿನಿಮಾದಲ್ಲಿ ಸಾಧನೆ ಮಾಡಿದ್ದಾರೆ, ಡಾ.ರಾಜ್ಕುಮಾರ್ ಕುಟುಂಬ ಮಾಡಿದ ಸೇವೆಗಳು ಪುನೀತ್ ಅವರ ನಿಧನದ ನಂತರ ಸಮಾಜಕ್ಕೆ ತಿಳಿಯುತ್ತಿದೆ, ಸ್ವಾರ್ಥಕ್ಕಾಗಿ ಪ್ರೀತಿಸುವ ಪ್ರಸ್ತುತ ಸಂದರ್ಭದಲ್ಲಿ ಯಾವುದೇ ನಿಸ್ವಾರ್ಥ ಪ್ರೀತಿ ಅಭಿಮಾನದಿಂದ ದೊಡ್ಡ ಮಟ್ಟದಲ್ಲಿ ನುಡಿನಮನ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು
ಪವರ್ಸ್ಟಾರ್ ಪುನೀತ್ರಾಜ್ಕುಮಾರ್ ಅವರಿಗೆ ಸಲ್ಲಿಸಿದ ಗೌರವವಾಗಿದೆ ಎಂದರು.
ನಿರ್ದೇಶಕ ಮಳವಳ್ಳಿ ಸಾಯಿಕೃಷ್ಣ ಮಾತನಾಡಿ, ತನ್ನ ನಿರ್ದೇಶನದ ಸಿನಿಮಾದಲ್ಲಿ ಪುನೀತ್ ಅವರನ್ನು ನಾಯಕರಾಗಿ ಮಾಡಿ, ಮಳವಳ್ಳಿಗೆ ಕರೆತಂದು ಸಂತೋಷವನ್ನು ಹಂಚಿಕೊಳ್ಳಕೇಬೆAದು ಅಂದುಕೊAಡಿದ್ದೆ. ಆದರೇ ಪುನೀತ್ರಾಜ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಾಂಶುಪಾಲರಾದ ಡಾ ಟಿ ಡಿ ಅನುಸೂಯ ಪ್ರಾಸ್ತಾವಿಕವಾಗಿ ನುಡಿ ನಮನ ಸಲ್ಲಿಸಿದರು.
ಬೆಂಗಳೂರು ನಾರಾಯಣ ನೇತ್ರಾಲಯದ ಮೆಡಿಕಲ್ ಇನ್ಸ್ಟಿಟ್ಯೂಟ್ ವತಿಯಿಂದ ಪುನೀತ್ ರಾಜ್ಕುಮಾರ್ ಅವರ ಸ್ಮರಣಾರ್ಥವಾಗಿ ನಿಧನರಾದ ಮೇಲೆ ವ್ಯಕ್ತಿಗಳ ನೇತ್ರಗಳನ್ನು ದಾನವಾಗಿ ನೀಡುವ ನೋಂದಣಿ ಕಾರ್ಯಕ್ರಮದಲ್ಲಿ ೩೦೦ ಹೆಚ್ಚು ಜನರು ಹೆಸರನ್ನು ನೊಂದಾಯಿಸಿಕೊAಡರು.
ಮಳವಳ್ಳಿ ಮಹದೇವಸ್ವಾಮಿ ಅವರಿಂದ ಗೀತ ಗಾಯನ, ಅಲ್ಟಿಮೇಟ್ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ಅಪ್ಪುವಿನ ಶೋಕಾಚರಣೆಯ ನೃತ್ಯದ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು. ವಿದ್ಯಾರ್ಥಿಯೊಬ್ಬ ನೃತ್ಯದ ಸಂದರ್ಭದಲ್ಲಿ ಪುನೀತ್ ಭಾವಚಿತ್ರ ಬಿಡಿಸಿ ಗೌರವ ಸಲ್ಲಿಸಿದರು.
ಐದು ಸಾವಿರಕ್ಕೂ ಹೆಚ್ಚು ಮಂದಿಗೆ ಒಡೆಪಾಯಿಸದ ಅನ್ನಸಂತರ್ಪಣೆಯನ್ನು
ಹಮ್ಮಿಕೊಳ್ಳಲಾಗಿತ್ತು. ಪುನೀತ್ರಾಜ್ಕುಮಾರ್ ಭಾವಚಿತ್ರದಲ್ಲಿ ಸೆಲ್ಪಿ
ತೆಗೆದುಕೊಳ್ಳುವುವುದು ನಿರಂತರವಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕರಾದ ಮಳವಳ್ಳಿ ಸಾಯಿಕೃಷ್ಣ, ಮುರುಳಿ ಮೋಹನ್,ಚಲನಚಿತ್ರ ಪೋಷಕ ನಟರಾದ ಮುನಿ, ಪೊಟ್ರೆ ನಾಗರಾಜು ಕಾರ್ಯಕ್ರಮ ಆಯೋಜಕರಾದ ತಳಗವಾದಿ ಪ್ರಕಾಶ್, ಶಿವರಾಜ್, ಕೃಷ್ಣ, ಕುಮಾರ್, ಭರತೇಶ್, ಜಯಚಂದ್ರ, ಗಾಂಧಿ, ಸಿದ್ದಾರ್ಥ್ ಸೇರಿದಂತೆ ಇತರರು ಇದ್ದರು
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ