ಮಳವಳ್ಳಿ: ತಾಲ್ಲೂಕಿನಲ್ಲಿ ದರೋಡೆ, ಸರ ಕಳವು, ಬೈಕ್ ಕಳ್ಳತನಗಳು ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ರಾಜ್ಯ ಹೆದ್ದಾರಿಗಳಲ್ಲಿ ತಡೆಗೋಡೆಗೆ ಹಾಕಿದ್ದ ಕಬ್ಬಿಣದ ಶೀಟ್ ಗಳನ್ನು ಕಳ್ಳರು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿವೆ.
ಮಳವಳ್ಳಿ ತಾಲ್ಲೂಕಿನ ಮಾರೇಹಳ್ಳಿ ಕೆರೆಯ ಏರಿಯ ಮೇಲೆ ಹಾಗೂ ರಾಜ್ಯ ಹೆದ್ದಾರಿಯ ಹುಲ್ಲಂಬಳಿಯ ಶಿವಸಮುದ್ರ ರಸ್ತೆ ಬದಿಯಲ್ಲಿ ಪ್ರಯಾಣಿಕರ ಸುರಕ್ಷಿತೆಗೆ ಅಳವಡಿಸಿದ ಕಬ್ಬಿಣದ ತಡೆಗೋಡೆಯನ್ನು ಕಳ್ಳರು ರಾತ್ರೋರಾತ್ರಿ ಮಾಯಾ ಮಾಡಿದ್ದಾರೆ.
ಅದುವೇ ಕಿಲೋಮೀಟರ್ ಗಟ್ಟಲೆಯ ಕಬ್ಬಿಣವನ್ನು ಕಳ್ಳರು ಬಿಚ್ಚಿದ್ದು, ಹೇಗೆ ಅನುಮಾನ ಕಾಡುತ್ತಿದೆ. ದಿನೇ ದಿನೇ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಚಿನ್ನಾಭರಣ, ಹಣ, ವಾಹನಗಳನ್ನು ಕದಿಯುವ ಕಳ್ಳರ ನಡುವೆ ಇದೀಗ ಹೆದ್ದಾರಿ ಬದಿಯ ತಡೆಗೋಡೆಗಳಂತೆ ಹಾಕಲಾಗಿರುವ ಕಬ್ಬಿಣದ ಶೀಟ್ ಗಳನ್ನು ಕಳ್ಳರು ಕಳ್ಳತನ ಮಾಡಿದ್ದಾರೆ. ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಟ ನಡೆಸುವ ಮುಖ್ಯರಸ್ತೆಗಳ ಬದಿಯಲ್ಲೇ ಹೈವೇ ಪೆಟ್ರೋಲ್ ವಾಗನಗಳು, ದ್ವಿಚಕ್ರ ವಾಹನದ ಪೊಲೀಸರು ಗಸ್ತು ತಿರುಗುತ್ತಿದ್ದರೂ ಕಳ್ಳರು ಕಿಲೋಮೀಟರ್ ಗಟ್ಟಲೆ ಶೀಟ್ ಗಳ ಕಳವಿನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿರುವುದಾದರೂ ಹೇಗೆ ಎನ್ನುವ ಅನುಮಾನ ಕಾಡುತ್ತಿದೆ.
ಘಟನಾ ಸ್ಥಳಕ್ಕೆ ಲೋಕೋಪ ಯೋಗಿ ಇಲಾಖೆಯ ಎಇಇ ಪುಟ್ಟಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಳತೆ ಮಾಡಿ ದೂರು ನೀಡಲು ಮುಂದಾಗಿದ್ದಾರೆ.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ