December 22, 2024

Bhavana Tv

Its Your Channel

ಟಿಪ್ಪರ್ ಲಾರಿ ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿ; ಒಂದೇ ಕುಟುಂಬದ ೫ ಜನರ ಸಾವು

ಮಳವಳ್ಳಿ ; ನೆನ್ನೆ ರಾತ್ರಿ ಮಳವಳ್ಳಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿದಂತೆ ಐವರು ಧಾರುಣವಾಗಿ ಸಾವನ್ನಪ್ಪಿರುವ ದುರಂತ ಘಟನೆಯೊಂದು ಜರುಗಿದೆ.
ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗಿದ್ದ ೫೦ ವರ್ಷ ವಯಸ್ಸಿನ ಮುತ್ತಮ್ಮ ಇವರ ಮಗ ಅಟೋ ಚಾಲಕ ೨೫ ವರ್ಷ ವಯಸ್ಸಿನ ವೆಂಕಟೇಶ, ಮುತ್ತಮ್ಮನ ಮಗಳಾದ ೩೦ ವರ್ಷ ವಯಸ್ಸಿನ ಬಸಮ್ಮಣಿ.
ಈಕೆಯ ಮಕ್ಕಳಾದ ೮ ವರ್ಷದ ಅಮೃತ ಹಾಗೂ ಒಂದು ವರ್ಷದ ನಂಜುAಡ ಮೃತ ಪಟ್ಟವರಾಗಿದ್ದು ಇವರೆಲ್ಲರೂ ದಡದಪುರ ಗ್ರಾಮದ ವಾಸಿಗಳಾಗಿದ್ದಾರೆ.
ನೆನ್ನೆ ಸಂಜೆ ೬.೪೫ ರ ಸಮಯದಲ್ಲಿ ಮಳವಳ್ಳಿ- ಮದ್ದೂರು ಹೆದ್ದಾರಿ ರಸ್ತೆಯ ನೆಲಮಾಕನಹಳ್ಳಿ ಗೇಟ್ ಬಳಿ ತಮ್ಮದೇ ಆಟೋದಲ್ಲಿ ಈ ಕುಟುಂಬ ಮಳವಳ್ಳಿ ಕಡೆಗೆ ಬರುತ್ತಿದ್ದಾಗ ಮಳವಳ್ಳಿ ಕಡೆಯಿಂದ ಹೋಗುತ್ತಿದ್ದ ಟಿಪ್ಪರ್ ಲಾರಿ ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಈ ಭೀಕರ ದುರುಂತ ಸಂಭವಿಸಿದೆ.
ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು ಅಟೋದ ಒಳಗೆ ಸಿಕ್ಕ ಮುತ್ತಮ್ಮ ಮಗಳು ಬಸಮ್ಮಣಿ ಮಗ ಹಾಗೂ ಆಟೋ ಚಾಲಕ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದರೆ ಮಕ್ಕಳಾದ ಅಮೃತ ಹಾಗೂ ನಂಜುAಡ ಮಳವಳ್ಳಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಮುತ್ತಮ್ಮ ಅವರ ಮಗಳಾದ ಬಸಮ್ಮಣಿ ಮದ್ದೂರಿನ ಗೆಜ್ಜಲಗೆರೆ ಬಳಿಯ ಸಾಯಿ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ಇತ್ತೀಚಿಗೆ ಕೆಲಸ ಬಿಟ್ಟಿದ್ದ ಹಿನ್ನೆಲೆಯಲ್ಲಿ ಅವರಿಗೆ ಬರಬೇಕಿದ್ದ ಪಿ ಎಫ್ ಹಣಕ್ಕೆ ಅರ್ಜಿ ಸಲ್ಲಿಸಿ ವಾಪಸ್ಸು ಬರುವಾಗ ಈ ದುರಂತ ಜರುಗಿ ಹೋಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಯತೀಶ್, ಅಡಿಷನಲ್ ಎಸ್ಪಿ ಧನಂಜಯ್, ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್, ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ಎ ಕೆ ರಾಜೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿ ದ್ದಾರೆ.
ಇಂದು ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಡಾ. ಕೆ ಅನ್ನದಾನಿ, ಮಾಜಿ ಸಚಿವ ಪಿ ಎಂ ನರೇಂದ್ರಸ್ವಾಮಿ ಮೃತರ ಅಂತಿಮ ದರ್ಶನ ಪಡೆದರು

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: