ಮಳವಳ್ಳಿ : ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಮಳವಳ್ಳಿ ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು ಎಸ್ ಕೃಷ್ಣ ಸ್ವರ್ಣಸಂದ್ರ ರವರಿಗೆ ಅತಿ ಹೆಚ್ಚು ಮತಗಳನ್ನು ನೀಡಿ ಆಶೀರ್ವಾದ ಮಾಡಿರುವ ತಮಗೆ ಮತ್ತು ತಮ್ಮ ಅಭಿಮಾನಕ್ಕೆ ವಿಶೇಷವಾದ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಎನ್ ಎಲ್ ಭರತ್ ರಾಜ್ ತಿಳಿಸಿದರು .
ಅವರು ಮಳವಳ್ಳಿಯ ವಿಶ್ವ ಮಾನವ ವಿಚಾರ ವೇದಿಕೆಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ಎಸ್ ಕೃಷ್ಣ ಸ್ವರ್ಣಸಂದ್ರ ರವರಿಗೆ .ಪ್ರತಿಸ್ಪರ್ಧಿಗಿಂತ ೧೬೪ ಮತಗಳನ್ನು ಹೆಚ್ಚಾಗಿ ನೀಡುವ ಮೂಲಕ ಪ್ರೀತಿಪೂರ್ವಕ ಬೆಂಬಲವನ್ನು ವ್ಯಕ್ತ ಪಡಿಸಿರುವ ತಮ್ಮಗಳ ಋಣವನ್ನು ಎಂದಿಗೂ ಮರೆಯುವುದಿಲ್ಲ ಎನ್ನುತ್ತ ಮುಂದೆಯು ಸಹ ಕನ್ನಡ ನಾಡು. ನುಡಿ ಭಾಷೆ ಸಾಹಿತ್ಯ ಸಂಸ್ಕೃತಿ. ಸೌಹಾರ್ದ. ಇತರೆ ಪ್ರಗತಿಪರ ಚಟುವಟಿಕೆಗಳಿಗೆ ತಾವು ಸದಾ ಬೆಂಬಲ ನೀಡಬೇಕೆಂದು ವಿನಂತಿಸಿಕೊAಡರು. ಅಲ್ಲದೆ ಕಸಾಪ ಚುನಾವಣೆಯಲ್ಲಿ ಕೃಷ್ಣಸ್ವರ್ಣಸಂದ್ರ ಪರವಾಗಿ ಹಲವು ಮಂದಿ ಕಾರ್ಯಕರ್ತರು ಮುಖಂಡರು ಪ್ರಾಮಾಣಿಕವಾಗಿ ದುಡಿದಿದ್ದಾರೆ ಅವರಿಗೂ ಅಭಿನಂದನೆಯನ್ನ ಸಲ್ಲಿಸುತ್ತೆವೆ.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾದ್ಯಕ್ಷರಾಗಿ ಆಯ್ಕೆಯಾ ಗಿರುವ ರವಿಕುಮಾರ್ ಚಾಮಲಾಪುರ ರವರನ್ನು ಆಯ್ಕೆಮಾಡಿರುವ ಮತದಾರರ ಆಯ್ಕೆಯನ್ನು ಗೌರವಿಸುತ್ತೇವೆ ಪ್ರಜಾಪ್ರಭುತ್ವದಲ್ಲಿ ಮತದಾರರೆ ಮಹಾಪ್ರಭುಗಳು ಆಧಾರದಂತೆ ಅವರನ್ನು ಅಭಿನಂದಿಸುತ್ತೇವೆ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಕೊಡುತ್ತವೆ ಕನ್ನಡದ ತೇರನ್ನು ಬದ್ದತೆಯಿಂದ ಎಳೆದು ಜಿಲ್ಲೆಗೆ ಕೀರ್ತಿ ತರಲೆಂದು ಆಶಿಸುತ್ತವೆ ಎಂದರು.
ಪ್ರತಿಕಾಗೋಷ್ಠಿಯಲ್ಲಿ ಹಿರಿಯ ಸಾಹಿತಿಗಳಾದ ಮ.ಸಿ ನಾರಾಯಣ ಯೋಗ ಗುರುಗಳಾದ ಮಲ್ಲಿಕಾರ್ಜುನಸ್ವಾಮಿ ಪೇಟೆ ಬೀದಿ ದೊಡ್ಡಣ್ಣ ಪತ್ರಕರ್ತರಾದ ನಾಗೇಶ , ಮರಿಲಿಂಗಯ್ಯ . ದಾಸ. ಉಪಸ್ಥಿತರಿದ್ದರು.
ವರದಿ:ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ