December 22, 2024

Bhavana Tv

Its Your Channel

ಬೈಕ್ ಮತ್ತು ಭತ್ತ ಕಟಾವು ಮಾಡುವ ಯಂತ್ರದ ನಡುವೆ ಮುಖಾಮುಖಿ ಡಿಕ್ಕಿ, ಯುವಕ ಮೃತ

ಮಳವಳ್ಳಿ. ಬೈಕ್ ಮತ್ತು ಭತ್ತ ಕಟಾವು ಮಾಡುವ ಯಂತ್ರದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಮಳವಳ್ಳಿ ಪಟ್ಟಣದ ಹೊರವಲಯದ ಮಾರೇಹಳ್ಳಿ ಬಳಿ ನೆನ್ನೆ ರಾತ್ರಿ ನಡೆದಿದೆ.
ಕೊಳ್ಳೇಗಾಲ ತಾಲ್ಲೂಕಿನ ಸಿಂಗಾನಲೂರು ಗ್ರಾಮದ ಮಹದೇವ ಎಂಬವರು ಮಗನಾದ ,೨೩ ವರ್ಷದ ಮಹೇಂದ್ರ ಮೃತಪಟ್ಟ ವ್ಯಕ್ತಿಯಾಗಿದ್ದಾನೆ .
ಮಹೇಂದ್ರ ಬೆಂಗಳೂರು ಪೆಟ್ರೋಲ್ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದು ತಾಯಿಯ ಅನಾರೋಗ್ಯದಿಂದ ಬಳಲುತ್ತಿದ್ದು ಇವರನ್ನು ನೋಡಲೆಂದು ಸಿಂಗಾನಲೂರು ಗ್ರಾಮಕ್ಕೆ ತೆರಳುತ್ತಿದ್ದಾಗ ಸುಮಾರು ರಾತ್ರಿ ೮.೩೦ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ ಮಳವಳ್ಳಿ-ಕೊಳ್ಳೇಗಾಲ ಮುಖ್ಯರಸ್ತೆ ೨೦೯ರ ಮಾರೇಹಳ್ಳಿಗ್ರಾಮದ ಬಳಿ ಎದುರಿನಿಂದ ಬಂದ ಭಕ್ತ ಕಟಾವು ಮಾಡುವ ಯಂತ್ರವು ಬೈಕ್ ಕ್ಕೆ ಡಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡಿದ್ದ ಮಹೇಂದ್ರ ನನ್ನು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಈ ಸಂಬAಧ ಮಳವಳ್ಳಿ ಗ್ರಾಮಾಂತರ ಪೋಲೀಸ್ ನವರು ಪ್ರಕರಣವನ್ನು ದಾಖಲು ಮಾಡಿಕೊಂಡು ವಾಹನಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: