December 22, 2024

Bhavana Tv

Its Your Channel

ರೇಷ್ಮೆ ಮಾರುಕಟ್ಟೆಯಲ್ಲಿ ರೇಷ್ಮೆ ಬೆಳೆಗಾರರಿಗೆ ಅನ್ಯಾಯವಾಗುತ್ತಿದ್ದು ಕೂಡಲೇ ಸರಿಪಡಿಸುವಂತೆ ಸಚಿವ ಕೆ.ಸಿ.ನಾರಾಯಣ ಗೌಡರಿಗೆ ರೈತರ ಮನವಿ

ಮಳವಳ್ಳಿ : ಕೊಳ್ಳೇಗಾಲ ಮತ್ತು ರಾಮನಗರ ರೇಷ್ಮೆ ಮಾರಾಟ ಮಾರುಕಟ್ಟೆಯಲ್ಲಿ ರೇಷ್ಮೆ ಬೆಳೆಗಾರರಿಗೆ ಅನ್ಯಾಯವಾಗುತ್ತಿದ್ದು ಕೂಡಲೇ ಇದನ್ನು ಸರಿಪಡಿಸುವಂತೆ ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ ಅವರಿಗೆ ರೈತರು ಮನವಿ ಸಲ್ಲಿಸಿದರು.
ಪಟ್ಟಣದ ಟಿಎಪಿಸಿಎಂಎಸ್ ರೈತ ಸಮುದಾಯ ಭವನದ ಬಳಿ ಸಚಿವರನ್ನು ಹಲವು ರೈತರು ಭೇಟಿ ಮಾಡಿ ರೇಷ್ಮೆ ಮಾರುಕಟ್ಟೆಗಳಲ್ಲಿ ರೇಷ್ಮೆ ಗೂಡನ್ನು ರೈತರ ಬಳಿ ಕೆಲ ರೀರಲ್ ಗಳು ಹೆಚ್ಚಿನ ಬೆಲೆಗೆ ಬೀಡ್ ಮಾಡಿ ಬೇರೆ ರೀರಲ್ ಗಳು ಖರೀದಿ ಮಾಡದಂತೆ ತಡೆದು ಮತ್ತೆ ರೈತರ ಬಳಿ ೫೦ರಿಂದ ೧೦೦ ರೂ.ಕಡಿಮೆ ಬೆಲೆಗೆ ಕೊಡುವಂತೆ ಒತ್ತಾಯಿಸುವುದರ ಜೊತೆಗೆ ಕೆಲ ಕೆಟ್ಟ ಮಾತುಗಳಿಂದ ಅವಮಾನಿಸುತ್ತಾರೆ. ಅಲ್ಲದೇ ಬಿಡ್ ಮಾಡುವ ಸಂದರ್ಭದಲ್ಲಿ ಮಾರುಕಟ್ಟೆಗಳಲ್ಲಿ ಸರಿಯಾದ ಮಾಹಿತಿಯನ್ನು ನೀಡುವುದಿಲ್ಲ. ಅನ್ ಲೈನ್ ನಲ್ಲಿ ನಮೂದಿಸಿದ ದರ ನೀಡದೇ ಕಡಿಮೆ ಹಣ ನೀಡುತ್ತಾರೆ. ತೂಕದ ಮಾಹಿತಿಯನ್ನು ನೀಡದೇ ರೈತರನ್ನು ವಂಚಿಸುವ ಕೆಲಸ ನಡೆಯುತ್ತಿದೆ ಎಂದು ದೂರಿದರು.
ಸ್ಥಳೀಯ ದಲ್ಲಾಳಿಗಳು ಹಾಗೂ ಕೆಲ ಅನಧಿಕೃತ ವ್ಯಕ್ತಿಗಳು ರೈತರಿಗೆ ತೊಂದರೆ ನೀಡುತ್ತಾ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಾರೆ ಹೀಗಾಗಿ ಈ ಬಗ್ಗೆ ನೀವು ಗಮನ ಹರಿಸಿ ಅಂತಹ ವ್ಯವಸ್ಥೆ ಸರಿಪಡಿಸಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು ಎಂದು ಸಚಿವರಿಗೆ ರೈತರು ಮನವಿ ಮಾಡಿಕೊಂಡರು.
ಈ ಬಗ್ಗೆ ಸಚಿವ ಕೆ.ಸಿ.ನಾರಾಯಣಗೌಡ ಅವರು ದೂರವಾಣಿ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿ ರೈತರ ದೂರಿನ ಬಗ್ಗೆ ಸೂಕ್ತ ಕ್ರಮ ವಹಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.
ಟಿಎಪಿಸಿಎಂಎಸ್ ನಿರ್ದೇಶಕ ಕೆ.ಎಸ್.ದ್ಯಾಪೇಗೌಡ, ಎ.ಸಿ.ಅಶೋಕ್, ಶಿವಲಿಂಗು, ನಾಗರಾಜು, ಜಯರಾಮ, ಚನ್ನಿಗರಾಮು, ದ್ಯಾಪೇಗೌಡ, ದೊಡ್ಡಭೂಮಿಗೌಡ ಸೇರಿದಂತೆ ಹಲವರು ಇದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: