December 20, 2024

Bhavana Tv

Its Your Channel

ಡಾ. ಬಿ ಆರ್ ಅಂಬೇಡ್ಕರ್‌ರವರ ೬೫ನೇ ಮಹಾ ಪರಿ ನಿರ್ವಾಣ ದಿನ

ಮಳವಳ್ಳಿ : ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮನ್ನು ಅಗಲಿದ ಈ ದಿನವನ್ನು ಇಡೀ ವಿಶ್ವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾ ಪರಿ ನಿರ್ವಾಣ ದಿನವನ್ನಾಗಿ ಆಚರಿಸುತ್ತಿದೆ.
ಆದರೆ ಇಲ್ಲೊಬ್ಬ ತಹಸೀಲ್ದಾರ್ ಅವರು ಇಂದು ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರಗೊAಡ ದಿನವನ್ನು ಮಹಾ ಪರಿ ನಿರ್ವಾಣ ದಿನವಾಗಿ ಆಚರಿಸಲಾಗುತ್ತಿದೆ ಎಂದು ಹೇಳುವ ಮೂಲಕ ತಮ್ಮ ಬೌದ್ದಿಕ ಬುದ್ದಿ ಮಟ್ಟವನ್ನು ಪ್ರದರ್ಶಿಸಿದ್ದಾರೆ.
ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಇಂದು ತಾಲ್ಲೂಕು ಆಡಳಿತ ವತಿಯಿಂದ ಡಾ. ಬಿ ಆರ್ ಅಂಬೇಡ್ಕರ್ ಅವರ ೬೫ನೇ ಮಹಾ ಪರಿ ನಿರ್ವಾಣ ದಿನವನ್ನು ಆಚರಿಸಲಾಯಿತು.
ಕೋವಿಡ್ ಹಾಗೂ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದ ತಾಲ್ಲೂಕು ಪಂಚಾಯ್ತಿ ಇಓ ರಾಮಲಿಂಗಯ್ಯ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಜನಾರ್ಧನ್, ತಾಲ್ಲೂಕು ಕಚೇರಿಯ ಗ್ರೇಡ್ ೨ ತಹಸೀಲ್ದಾರ್ ಜಯರಾಂ ಮತ್ತಿತರರ ಅಧಿಕಾರಿಗಳು ಪಾಲ್ಗೊಂಡು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವ ಚಿತ್ರದ ಮುಂದೆ ಜ್ಯೋತಿ ಬೆಳಗುವುದರ ಜೊತೆಗೆ ಬಾಬಾ ಸಾಹೇಬ್ ರ ಭಾವಚಿತ್ರಕ್ಕೆ ಪುಷ್ರ‍್ಪಾಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇಒ ರಾಮಲಿಂಗಯ್ಯ ಅವರು.
ಅಂಬೇಡ್ಕರ್ ಅವರ ಪರಿ ನಿರ್ವಾಣ ದಿನದ ಈ ಸಂದರ್ಭದಲ್ಲಿ ಎಲ್ಲರೂ ಸಮಾನತೆ ಸಹಭಾಳ್ವೆ ಜೊತೆಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿ ಕೊಳ್ಳೋಣ ಎಂದು ಕರೆ ನೀಡಿದರು.
ನಂತರ ಮಾತನಾಡಿದ ಗ್ರೇಡ್ ೨ ತಹಸೀಲ್ದಾರ್ ಜಯರಾಂ ಅವರು ಅಂಬೇಡ್ಕರ್ ಅವರು ಬೌದ್ಧ ಮತಕ್ಕೆ ಮತಾಂತರ ಗೊಂಡ ಈ ಶುಭ ದಿನವನ್ನು ಇಡೀ ವಿಶ್ವಾದ್ಯಂತ ಸಡಗರ ಸಂಭ್ರಮದಿAದ ಆಚರಿಸುತ್ತಿದೆ ಎಂದು ತಮ್ಮ ವಿಶ್ವ ಜ್ಞಾನವನ್ನು ಪ್ರದರ್ಶಿಸಿದ್ದಾರೆ.
ಮುಂದುವರಿದ ಜಯರಾಂ ಅವರು ಮತಾಂತರ ಹೊಂದಿದ ದಿನವಷ್ಟೇ ಅಲ್ಲದೇ ಇಂದು ಅಂಬೇಡ್ಕರ್ ಅವರಿಗೆ ಜ್ಞಾನೋದಯವಾದ ದಿನ, ಹಾಗಾಗಿ ಇಡೀ ವಿಶ್ವ ಈ ದಿನವನ್ನು ಸಡಗರ ಸಂಭ್ರಮದಿAದ ಆಚರಿಸುತ್ತಿದೆ.
ತಾಲ್ಲೂಕು ಆಡಳಿತ ಕೋವಿಡ್ ಹಾಗೂ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಈ ಭಾರಿ ಸರಳವಾಗಿ ಆಚರಿಸುತ್ತಿದ್ದು ಮುಂದಿನ ವರ್ಷ ಬಹು ವಿಜೃಂಭಣೆಯಿAದ ಆಚರಿಸಲಾಗುವುದು ಎಂದು ಹೇಳುವ ಮೂಲಕ ತಮ್ಮ ಪ್ರಬುದ್ಧ ಜ್ಞಾನವನ್ನು ಪ್ರದರ್ಶಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಇಡೀ ವಿಶ್ವಾದ್ಯಂತ ಅಂಬೇಡ್ಕರ್ ಅವರು ಅಗಲಿದ ಈ ೬೫ ನೇ ವರ್ಷದ ಮಹಾ ಪರಿ ನಿರ್ವಾಣ ದಿನವನ್ನು ಭಕ್ತಿ ಗೌರವದಿಂದ ಬಾಬಾ ಸಾಹೇಬ್ ರನ್ನು ಸ್ಮರಿಸುತ್ತಿರುವಾಗ ಈ ದಿನದ ಮಹತ್ವದ ಪರಿವೆಯೇ ಇಲ್ಲದ ತಹಸೀಲ್ದಾರ್ ಅವರು ಈ ದಿನ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರ ಗೊಂಡ ದಿನ ಈ ದಿನವನ್ನು ವಿಶ್ವ ಸಡಗರ ಸಂಭ್ರಮದಿAದ ಆಚರಿಸುತ್ತಿದೆ ಎಂದಿರುವುದು ನಿಜಕ್ಕೂ ದುರಾದೃಷ್ಟಕರ ಸಂಗತಿಯೇ ಸರಿ.

ವರದಿ:ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: