December 22, 2024

Bhavana Tv

Its Your Channel

ಅಂಬೇಡ್ಕರ್‌ರವರ ಪರಿ ನಿರ್ವಾಣ ದಿನದ ಅಂಗವಾಗಿ ದಲಿತ ಪರ ಸಂಘಟನೆಗಳ ಮುಖಂಡರಿOದ ಮೇಣದ ಬತ್ತಿ ಮೆರವಣಿಗೆ

ಮಳವಳ್ಳಿ ; ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೬೫ನೇ ಪರಿ ನಿರ್ವಾಣ ದಿನದ ಅಂಗವಾಗಿ ಮಳವಳ್ಳಿ ಪಟ್ಟಣದಲ್ಲಿ ಡಾ ಬಿ ಆರ್ ಅಂಬೇಡ್ಕರ್ ವಿಚಾರ ವೇದಿಕೆ ಆಶ್ರಯದಲ್ಲಿ ಹಲವಾರು ದಲಿತ ಪರ ಸಂಘಟನೆಗಳ ಮುಖಂಡರು ಮೇಣದ ಬತ್ತಿ ಮೆರವಣಿಗೆ ಮೂಲಕ ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದರು.
ಇಲ್ಲಿನ ಪ್ರವಾಸಿ ಮಂದಿರದ ಆವರಣದಿಂದ ಮೆರವಣಿಗೆ ಹೊರಟು ದಾರಿಯುದ್ದಕ್ಕೂ ಅಂಬೇಡ್ಕರ್ ಅವರ ಪರ ಜಯ ಘೋಷಗಳನ್ನು ಕೂಗಿದರು.
ಇಲ್ಲಿನ ಪೇಟೆ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು ನಂತರ ಅಂಬೇಡ್ಕರ್ ಭವನ ತಲುಪಿದ ಮೆರವಣಿಗೆ ಅಲ್ಲಿ ಸಮಾಪ್ತಿ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಂಬೇಡ್ಕರ್ ವಿಚಾರ ವೇದಿಕೆ ಅಧ್ಯಕ್ಷ ಎಂ ಆರ್ ಮಹೇಶ್ ಅವರು ಪಟ್ಟಣದ ಕೊಳ್ಳೇಗಾಲ ಮುಖ್ಯ ರಸ್ತೆಗೆ ಅಂಬೇಡ್ಕರ್ ರಸ್ತೆ ಎಂದು ನಾಮಕರಣ ಮಾಡುವಂತೆ ಹಿಂದಿನ ಆಡಳಿತ ಮಂಡಳಿಯ ಅವಧಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು ಆದರೆ ಈ ವರೆವಿಗೂ ಈ ನಿರ್ಣಯ ಕಾರ್ಯಗತ ಗೊಂಡಿಲ್ಲ ಎಂದು ವಿಷಾಧಿಸಿದರು.
ಈ ಕುರಿತು ನಾಳೆಯೇ ಪುರಸಭೆಗೆ ತೆರಳಿ ಮನವಿ ಸಲ್ಲಿಸಲಾಗುವುದು ಜೊತೆಗೆ ಇದೇ ರಸ್ತೆಯ ವಾಟರ್ ಟ್ಯಾಂಕ್ ಆವರಣದಲ್ಲಿ ಅಂಬೇಡ್ಕರ್ ಅವರ ಪುತ್ಥಳಿಯನ್ನು ಸ್ಥಾಪಿಸುವಂತೆ ಪುರಸಭೆಯನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮ ದಲ್ಲಿ ಪುರಸಭಾ ಸದಸ್ಯರಾದ ಸಿದ್ದರಾಜು, ಮಾಜಿ ಎಸ್ಸಿ ಎಸ್ಟಿ ನೌಕರರ ಸಂಘದ ಅಧ್ಯಕ್ಷರಾದ ನಾಗರಾಜು, ಮುಖಂಡರಾದ ಕಿರಣ್ ಶಂಕರ್, ದುಗ್ಗನಹಳ್ಳಿ ನಾಗರಾಜು, ಲಿಂಗದೇವರು, ಮತ್ತಿತರರು ಪಾಲ್ಗೊಂಡಿದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: