December 20, 2024

Bhavana Tv

Its Your Channel

ಮಚ್ಚು ಲಾಂಗ್ ತೋರಿಸಿ ಹಣ ದೋಚಿ ಪರಾರಿಯಾದ ದರೋಡೆಕೋರರು

ಳವಳ್ಳಿ : ಮಳವಳ್ಳಿ ಸುತ್ತಮುತ್ತ ಈ ವರೆಗೆ ನಿರ್ಜನ ಪ್ರದೇಶ ರಸ್ತೆಗಳಲ್ಲಿ ನಡೆಯುತ್ತಿದ್ದ ಕಳ್ಳತನ ದರೋಡೆ ಕೃತ್ಯಗಳು ಇದೀಗ ಪಟ್ಟಣದ ಮಗ್ಗುಲಲ್ಲೇ ಅದೂ ಸದಾ ವಾಹನಗಳ ಸಂಚಾರದಿAದ ಕೂಡಿದ ಹೆದ್ದಾರಿ ರಸ್ತೆ ಬದಿಯಲ್ಲೇ ವ್ಯಕ್ತಿಯೊಬ್ಬ ರಿಗೆ ಮಚ್ಚು ಲಾಂಗ್ ತೋರಿಸಿ ಬೆದರಿಸಿ ಅವರ ಬಳಿ ಇದ್ದ ಹಣವನ್ನು ದೋಚಿ ಪರಾರಿಯಾಗಿರುವ ಆಘಾತ ಕಾರಿ ಕೃತ್ಯವೊಂದು ಮಳವಳ್ಳಿ ಪಟ್ಟಣದ ದೊಡ್ಡಕೆರೆ ಬಳಿ ಜರುಗಿದೆ.

ಪಟ್ಟಣದ ಗಂಗಾಮತ ಬೀದಿಯ ವಾಸಿ ಪುಟ್ಟಸ್ವಾಮಿ ಎಂಬುವರೇ ದರೋಡೆ ಕೋರರ ದಾಳಿಗೆ ಬೆದರಿ ಹಣ ಕಳೆದುಕೊಂಡವರಾಗಿದ್ದು ಹೂವಿನ ವ್ಯಾಪಾರಿಯಾದ ಇವರು ನೆನ್ನೆ ರಾತ್ರಿ ೭ ಗಂಟೆ ಸಮಯದಲ್ಲಿ ದೊಡ್ಡಕೆರೆ ರಸ್ತೆ ಬದಿಯಲ್ಲಿ ದಂಡಿನ ಮಾರಮ್ಮನ ದೇವಸ್ಥಾನದ ಕಡೆಗೆ ತಮ್ಮ ಬೈಕ್ ನಲ್ಲಿ ಹೋಗುತ್ತಿದ್ದಾಗ ಈ ಕೃತ್ಯ ಜರುಗಿದೆ.
ಹಿಂದಿನಿAದ ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಪಂಚರ್ ಶಾಪ್ ಎಲ್ಲಿದೆ ಎಂದು ಕೇಳುವ ನೆಪದಲ್ಲಿ ಪುಟ್ಟಸ್ವಾಮಿ ಅವರನ್ನು ನಿಲ್ಲಿಸಿದ್ದಾರೆ.
ಪಂಚರ್ ಶಾಪ್ ಮುಂದೆ ಎಲ್ಲೂ ಇಲ್ಲ ನೀವು ಪಟ್ಟಣಕ್ಕೆ ವಾಪಸ್ ಹೋಗಿ ಎಂದು ಹೇಳುತ್ತಿರುವಾಗಲೇ ಬೈಕ್ ಇಳಿದ ಒಬ್ಬಾತ ಪುಟ್ಟಸ್ವಾಮಿ ಅವರ ಕುತ್ತಿಗೆ ಪಟ್ಟಿಗೆ ಕೈ ಹಾಕಿದ್ದಾನೆ.
ಸಿಟ್ಟುಗೊಂಡ ಪುಟ್ಟಸ್ವಾಮಿ ಕೊಸರಾಡುತ್ತಿದ್ದಂತೆ ಲಾಂಗ್ ತೆಗೆದು ಕುತ್ತಿಗೆಗೆ ಹಿಡಿದ ದುಷ್ಕರ್ಮಿ ಕೊಸರಾಡಿದರೆ ಕುತ್ತಿಗೆ ಕೊಯ್ದು ಬಿಡುತ್ತೇನೆ ಎಂದು ಬೆದರಿಸಿದನಂತೆ ಇನ್ನೊಂದು ಚಾಕು ತೆಗೆದು ಅವರ ಹೊಟ್ಟೆ ಭಾಗಕ್ಕೆ ಹಿಡಿದ ಮತ್ತೊಬ್ಬ ದುಷ್ಕರ್ಮಿ ಇಬ್ಬರು ಸೇರಿ ಪುಟ್ಟಸ್ವಾಮಿ ಅವರನ್ನು ರಸ್ತೆ ಪಕ್ಕದ ಬೋಟಿಂಗ್ ಗ್ಯಾಲರಿ ಆವರಣಕ್ಕೆ ಕರೆದೊಯ್ದು ಅವರ ಬಳಿ ಇದ್ದ ೩೪ ಸಾವಿರ ರೂ ಗಳನ್ನು ಕಿತ್ತುಕೊಂಡು ಅವರನ್ನು ಕೆಳಗೆ ತಳ್ಳಿ ತಮ್ಮ ಬೈಕ್ ನಲ್ಲಿ ಪರಾರಿಯಾಗಿದ್ದಾರೆ.
ಈ ಸಂಬAಧ ಪುಟ್ಟಸ್ವಾಮಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕೊಂಡಿರುವ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: