December 22, 2024

Bhavana Tv

Its Your Channel

ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ವ್ಯಕ್ತಿಯೊಬ್ಬರು ತಡೆಯೊಡ್ಡುತ್ತಿದ್ದಾರೆಂದು ಆರೋಪಿಸಿ ತಳಗವಾದಿ ಗ್ರಾಮಸ್ಥರಿಂದ ಪ್ರತಿಭಟನೆ

ಮಳವಳ್ಳಿ : ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ವ್ಯಕ್ತಿಯೊಬ್ಬರು ತಡೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಿ ಮಳವಳ್ಳಿ ತಾಲ್ಲೂಕಿನ ತಳಗವಾದಿ ಗ್ರಾಮಸ್ಥರು ದೇವಿಪುರ – ತಳಗವಾದಿ ಗ್ರಾಮದ ರಸ್ತೆಯನ್ನು ತಡೆದು ಸೋಮವಾರ ಸಂಜೆ ಪ್ರತಿಭಟನೆ ನಡೆಸಿದರು.
ಕೊನೆಯ ಭಾಗದ ಮರಿಗೌಡ ರಸ್ತೆಯ ಜಾಗ ನಮ್ಮದು ಎಂದು ಕಾಮಗಾರಿಗೆ ತಡೆ ನೀಡಲು ಯತ್ನಿಸಿ ಜೆಸಿಬಿ ಅಡ್ಡಲಾಗಿ ಮಲಗಿದ್ದರು. ಹೀಗಾಗಿ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. ಇದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಗ್ರಾಮ ಪಂಚಾಯತಿ ಸದಸ್ಯ ಟಿ.ಎಚ್.ಆನಂದ್ ನೇತೃತ್ವದಲ್ಲಿ ಟ್ರಾಕ್ಟರ್ ತಂದು ದೇವಿಪುರ ಗ್ರಾಮದ ರಸ್ತೆಯ ಮಧ್ಯೆಭಾಗದಲ್ಲಿ ನಿಲ್ಲಿಸಿ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಮಾಹಿತಿ ತಿಳಿದ ಗ್ರಾಮಾಂತರ ಸಿಪಿಐ ಎ.ಕೆ.ರಾಜೇಶ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಮನವೊಲಿಸಿ ಟ್ರಾಕ್ಟರ್ ನ್ನು ತೆರವುಗೊಳಿಸಲಾಯಿತು.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ..

error: