ಮಳವಳ್ಳಿ ; ರಾಜ್ಯದ ಬಿಜೆಪಿ ಸರ್ಕಾರ ಜನರ ಮೂಲಭೂತ ಸಮಸ್ಯೆಗಳನ್ನ ಚರ್ಚಿಸಿ ಪರಿಹರಿಸಲು ಗಮನ ನೀಡದೆ ಭಾವನಾತ್ಮಕ ವಿಚಾರಗಳನ್ನ ಕೈಗೆತ್ತಿಕೊಂಡು ಜನರನ್ನ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಅಧ್ಯಕ್ಷರಾದ ದೇವಿ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಮದುವೆಗಾಗಿ ಮತಾಂತರ ನಿಷೇಧ. ಕಾಯ್ದೆ ಭೂ ಸುಧಾರಣೆ ಕಾಯ್ದೆ ಎ ಪಿ ಎಮ್ ಸಿ ಕಾಯ್ದೆ ಗೋಹತ್ಯೆ ನಿಷೇಧ ಕಾಯ್ದೆ ವಿದ್ಯುತ್ ಕಾಯ್ದೆಗಳನ್ನ ಜಾರಿಗೋಳಿಸಿ ಜನಸಾಮಾನ್ಯರ ದಿವಾಳಿ ಹಂಚಿಗೆ ಕೊಂಡೊಯ್ಯುತ್ತಿದ್ದಾರೆ ಎಂದು ಆರೋಪಿಸಿದ ಅವರು ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮದುವೆಗಾಗಿ ಮತಾಂತರ ತಡೆ ಕಾಯ್ದೆ. ವಿರುದ್ದ ಮತ್ತು ಭೂ ಸುಧಾರಣೆ ಕಾಯ್ದೆ ಎಪಿಎಮ್ ಸಿ ಕಾಯ್ದೆ ಗೋಹತ್ಯೆ ನಿಷೇಧ ಕಾಯ್ದೆಗಳನ್ನ ಬೆಳಗಾವಿ ಅಧಿವೇಶನದಲ್ಲಿ ವಾಪಸ್ಸು ಪಡೆಯಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಜನವಾದಿ ಮಹಿಳಾ ಸಂಘಟನೆಯಿAದ ನಡೆದ ಪ್ರತಿಭಟನೆಯನ್ನ ಉದ್ದೇಶಿಸಿ ಮಾತನಾಡಿದರು.
ಸಂವಿಧಾನ ದತ್ತವಾಗಿ ನಮಗೆ ದೊರಕಿರುವ ಧಾರ್ಮಿಕ ಸ್ವಾತಂತ್ರ‍್ಯ ಸಂಗಾತಿಯ ಆಯ್ಕೆಯ ಹಕ್ಕುಗಳನ್ನ ಉತ್ತರ ಪ್ರದೇಶದ ಯೋಗಿ ಅಧಿತ್ಯನಾಥನ ಮಾದರಿಯಲ್ಲಿ ನಾಶ ಮಾಡಲು ಹೋರಟಿದ್ದಾರೆ, ಇಂತಹ ಸಂವಿಧಾನ ವಿರೋಧಿ ನೀತಿಗಳನ್ನ ಜನತೆ ಧಿಕ್ಕರಿಸಿ ಪ್ರತಿಭಟನೆಗೆ ಸಜ್ಜಾಗ ಬೇಕೆಂದರು.
ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಎನ್ ಎಲ್ ಭರತ್ ರಾಜ್ ಮಾತನಾಡುತ್ತ ದೆಹಲಿಯ ರೈತ ಚಳುವಳಿಯ ಮುಂದೆ ವಿಶ್ವಗುರು ನರೇಂದ್ರ ಮೋದಿ ಮಂಡಿಯೂರಿ ಭೂ ಸುಧಾರಣೆ ಕಾಯ್ದೆ ಎಪಿಎಮ್ ಸಿ ಕಾಯ್ದೆ. ವಿದ್ಯುತ್ ಕಾಯ್ದೆಗಳನ್ನ ವಾಪಸ್ಸು ಪಡೆದು ಜನತೆ ಮುಂದೆ ತಲೆತಗ್ಗಸಿ ನಿಂತಿರುವಾಗ ಮೋದಿಗಾದ ಮುಖಭಂಗದಿAದ ಪಾಠ ಕಲಿಯದ ರಾಜ್ಯದ ಬಿಜೆಪಿ ಸರ್ಕಾರ ಮೇಲಿನ ಕಾಯ್ದೆಗಳನ್ನ ವಾಪಸ್ಸು ಪಡೆಯದೆ ನಾಟಕವಾಡುತ್ತಿದೆ ಅತಿವೃಷ್ಠಿಯಿಂದ ಹಾನಿಗೊಳಗಾಗಿ. ರೈತರ ಬೆಳೆಗಳಿಗೆ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ ನಿರುದ್ಯೋಗ ಹೆಚ್ಚಾಗಿದೆ ಇಂತಹ ವಿಷಯಗಳ ಬಗ್ಗೆ ಚರ್ಚಿಸದೆ ಅನಗತ್ಯ ವಿಷಯಗಳ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ಸಮಯ ಹಣ ಪೋಲು ಮಾಡುತ್ತಿದ್ದಾರೆಂದರು.
ಪ್ರತಿಭಟನೆ ಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಸುನೀತಾ ಮಂಜುಳಾ. ಸಿಐಟಿಯು ಜಿ ರಾಮಕೃಷ್ಣ ತಿಮ್ಮೆಗೌಡ ಪ್ರಾಂತ ರೈತ ಸಂಘದ ರಘುಸ್ವಾಮಿ ಸಿದ್ದರಾಜ್. ದೃವ. ಶಂಕರ್ ಜವರಯ್ಯ. ಕೂಲಿಕಾರಸಂಘದ ಶಿವಮಲ್ಲಯ್ಯ ಮತ್ತಿತರರು ಪಾಲ್ಗೊಂಡಿದ್ದರು.
ವರದಿ ; ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ