May 7, 2024

Bhavana Tv

Its Your Channel

ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

ಮಳವಳ್ಳಿ : ಮಂಡ್ಯ ಜಿಲ್ಲೆಯ ಸಹಕಾರ ಸಂಘಗಳು ಹಾಗೂ ಹಾಲು ಉತ್ಪಾದಕರ ಸಂಘಗಳ ಸದಸ್ಯರ ಠೇವಣಿ ಹಣದಿಂದಲೇ ಉಳಿದು ಕೊಂಡಿರುವ ಎಂ ಡಿ ಸಿ ಸಿ ಬ್ಯಾಂಕ್ ಆದರೆ ಸದರಿ ಸಹಕಾರ ಸಂಘಗಳ ಸದಸ್ಯರು ಹಣ ಪಡೆಯಲು ಬ್ಯಾಂಕ್‌ಗೆ ಹೋದರೆ ಬ್ಯಾಂಕ್ ನ ಅಧಿಕಾರಿ ಗಳು ಹಾಗೂ ಸದಸ್ಯರು ಬಹಳ ನಿಕೃಷ್ಟವಾಗಿ ನಡೆಸಿಕೊಳ್ಳು ತ್ತಿದ್ದಾರೆ ಎಂದು ಕೆ ಎಂ ಎಫ್ ನ ನಿರ್ದೇಶಕರು, ಮನ್ ಮುಲ್‌ನ ನಿರ್ದೇಶಕರು ಆದ ವಿ ಎಂ ವಿಶ್ವನಾಥ್ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಹರಿಹಾಯ್ದಿದ್ದಾರೆ.
ಮಳವಳ್ಳಿ ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರೂ ಆದ ಅವರ ಸಂಘದ ಆವರಣದಲ್ಲಿ ಏರ್ಪಾಡಾಗಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ದೊಡ್ಡ ದೊಡ್ಡ ಶ್ರೀಮಂತರು ಬ್ಯಾಂಕಿಗೆ ಬಂದಾಗ ಅವರಿಗೆ ಕುರ್ಚಿ ಹಾಕಿ ಕೂರಿಸಿ ಅವರಿಗೆ ಅಗತ್ಯ ಹಣ ಕೊಟ್ಟು ಗೌರವಯುತವಾಗಿ ಕಳುಹಿಸಿ ಕೊಡುವ ಬ್ಯಾಂಕಿನವರು ನಮ್ಮ ಹಳ್ಳಿಗಾಡಿನ ಜನ ಅದರಲ್ಲೂ ಮಹಿಳೆಯರು ಹಣ ಪಡೆಯಲು ಬ್ಯಾಂಕಿAಗೆ ಹೋದರೆ ಅವರಿಗೆ ಸಕಾಲಕ್ಕೆ ಹಣ ನೀಡದೆ ಬಹಳ ಬೇಜವಾಬ್ದಾರಿಯಿಂದ ನಡೆದು ಕೊಳ್ಳುವುದರ ಜೊತೆಗೆ ದಿನಗಟ್ಟಲೆ ಹಣಕ್ಕಾಗಿ ಅಲೆಸುತ್ತಿರುವ ಉದಾಹರಣೆ ಗಳು ಇವೆ ಎಂದು ಎಂ ಡಿ ಸಿ ಸಿ ಬ್ಯಾಂಕ್ ವಿರುದ್ಧ ಹರಿಹಾಯ್ದರು.
ಇದನ್ನು ಮನಗಂಡೇ ಕೆ ಎಂ ಎಫ್ ನಂದಿನಿ ಸಹಕಾರ ಬ್ಯಾಂಕ್ ಸ್ಥಾಪನೆಗೆ ಮುಂದಾಗಿದ್ದು ಈ ಬ್ಯಾಂಕ್‌ಗೆ ಈಗಾಗಲೇ ೧೦೦ ಕೋಟಿ ಹಣ ಬಿಡುಗಡೆ ಮಾಡಿರುವ ಮುಖ್ಯ ಮಂತ್ರಿ ಬಸವರಾಜು ಬೊಮ್ಮಾಯಿ ಅವರನ್ನು ಅಭಿನಂದಿಸಿದ ವಿಶ್ವನಾಥ್ ಅವರು ಸದ್ಯ ಬೆಂಗಳೂರಿನಲ್ಲಿ ಆರಂಭವಾಗುತ್ತಿರುವ ನಂದಿನಿ ಸಹಕಾರ ಬ್ಯಾಂಕ್ ಅದಷ್ಟು ಬೇಗ ರಾಜ್ಯಾದ್ಯಂತ ತನ್ನ ಶಾಖೆಗಳನ್ನು ತೆರೆಯಲಿದೆ ಎಂದು ತಿಳಿಸಿದರು.
ಅಲ್ಲದೆ ನಂದಿನಿ ಹಾಲಿನಿಂದ ಸಿಹಿ ತಿನಿಸುಗಳನ್ನು ತಯಾರು ಮಾಡುವ ಘಟಕವೊಂದು ಸದ್ಯದಲ್ಲೇ ಮಳವಳ್ಳಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಆರಂಭವಾಗಲಿದೆ ಎಂದು ತಿಳಿಸಿದ ಅವರು ಗ್ರಾಹಕರು ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡುವ ಮೂಲಕ ಒಕ್ಕೂಟದ ಬೆಳವಣಿಗೆಗೆ ಸಹಕಾರಿಸ ಬೇಕೆಂದು ಕೋರಿದರು.
ಇದೇ ಸಂದರ್ಭದಲ್ಲಿ ಡೈರಿಗೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಮೂವರು ಉತ್ಪಾದಕರು ಹಾಗೂ ಎಲ್ಲಾ ನಿರ್ದೇಶಕರನ್ನು ಸನ್ಮಾನಿಸ ಲಾಯಿತು.
ಜೊತೆಗೆ ಡೈರಿಗೆ ಹಾಲು ಸರಬರಾಜು ಮಾಡುವ ಗ್ರಾಮದ ಎಲ್ಲಾ ಉತ್ಪಾದಕರಿಗೆ ವಿಶ್ವನಾಥ್ ಅವರು ಸ್ವಂತ ಖರ್ಚಿನಲ್ಲಿ ಸ್ಟೀಲ್ ಕ್ಯಾನ್ ಗಳನ್ನು ವಿತರಿಸಿದರು.
ಸಭೆಯಲ್ಲಿ ಸಹಕಾರ ಸಂಘದ ವತಿಯಿಂದ ಕೆ ಎಂ ಎಫ್ ನಿರ್ಧೇಶಕರಾಗಿ ಅಯ್ಕೆಯಾಗಿರುವ ವಿಶ್ವನಾಥ್ ಅವರನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ರಾಜು, ನಿರ್ದೇಶಕರಾದ ಹೆಚ್ ವಿ ಶಿವರುದ್ರಪ್ಪ, ಶಿವಲಿಂಗೇಗೌಡ, ಚೌಡಯ್ಯ, ವಿ ಕೆ ನಂಜುAಡೇಗೌಡ, ರಾಜಮ್ಮ, ಗ್ರಾ ಪಂ ಸದಸ್ಯರಾದ ಎನ್ ಮಹದೇವ, ಗುರುಪ್ರಸಾದ್, ಕಾರ್ಯದರ್ಶಿ ಮಹದೇವೇಗೌಡ ಸಭೆಯಲ್ಲಿ ಪಾಲ್ಗೊಂಡಿದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: