ಮಳವಳ್ಳಿ ; ಚಲಿಸುತ್ತಿದ್ದ ಟ್ರ‍್ಯಾಕ್ಟರ್ ನಿಂದ ಬಿದ್ದು ಅದರ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆಯೊಂದು ಮಳವಳ್ಳಿ – ಮದ್ದೂರು ಹೆದ್ದಾರಿ ರಸ್ತೆಯ ನೆಲಮಾಕನಹಳ್ಳಿ ಗೇಟ್ ಬಳಿ ಜರುಗಿದೆ.
ಮೂಲತಃ ಚಿತ್ರದುರ್ಗ ಜಿಲ್ಲೆ ಹಗರಿ ಬೊಮ್ಮನಹಳ್ಳಿ ತಾಲ್ಲೂಕು ಬಸರಕೋಡ ತಾಂಡದ ವಾಸಿ ಚಂದ್ರ ನಾಯ್ಕ ಎಂಬುವರ ಮಗನಾದ ಕೃಷ್ಣನಾಯ್ಕ ಎಂಬಾತನೇ ಮೃತ ಪಟ್ಟವನಾಗಿದ್ದು ೩೨ ವರ್ಷ ವಯಸ್ಸಿನ ಈತ ಇತರೆ ಸಹಪಾಠಿಗಳ ಜೊತೆ ಟ್ರ‍್ಯಾಕ್ಟರ್ ಸಮೇತ ಬಂದು ಮಳವಳ್ಳಿ ಸಮೀಪದ ರಾಗಿಬೊಮ್ಮನಹಳ್ಳಿಯಲ್ಲಿ ಕ್ಯಾಂಪ್ ಮಾಡಿದ್ದು ಈ ಭಾಗದ ಜಮೀನು ಗಳಿಂದ ಕಬ್ಬನ್ನು ಭಾರತೀನಗರದ ಚಾಮ್ ಷುಗರ್ ಫ್ಯಾಕ್ಟರಿಗೆ ಪ್ರತಿನಿತ್ಯ ಸಾಗಿಸುತ್ತಿದ್ದರು ಎನ್ನಲಾಗಿದೆ.
ಇಂದು ಮುಂಜಾನೆ ೫ ಗಂಟೆ ಸಮಯದಲ್ಲಿ ಮಳವಳ್ಳಿ ಯಿಂದ ಭಾರತೀನಗರ ಕಡೆಗೆ ಖಾಲಿ ಟ್ರ‍್ಯಾಕ್ಟರ್ ನ್ನು ಓಡಿಸಿಕೊಂಡು ಹೋಗುತ್ತಿದ್ದಾಗ ನೆಲಮಾಕನಹಳ್ಳಿ ಗೇಟ್ ಬಳಿಯ ಹಾಲಿನ ಡೈರಿ ಮುಂಭಾಗ ಹೃದಯಾಘಾತದಿಂದಲೂ ಅಥವಾ ಕಡಿಮೆ ರಕ್ತ ದೊತ್ತಡದ ಕಾರಣದಿಂದಲೋ ಚಲಿಸುತ್ತಿದ್ದ ಟ್ರ‍್ಯಾಕ್ಟರ್‌ನಿಂದ ಕೆಳಗೆ ಬಿದ್ದ ಕೃಷ್ಣನಾಯ್ಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಾಲನೆಯಲ್ಲಿದ್ದ ಟ್ರ‍್ಯಾಕ್ಟರ್ ರಸ್ತೆ ಬದಿಯ ಹಳ್ಳಕ್ಕೆ ಹೋಗಿ ನಿಂತು ಕೊಂಡಿದ್ದು ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಶವವನ್ನು ವೈದ್ಯಕೀಯ ಪರೀಕ್ಷೆ ಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ