December 22, 2024

Bhavana Tv

Its Your Channel

ಬಸ್- ಬೈಕ್ ನಡುವೆ ಅಪಘಾತ; ಬೈಕ್ ಸವಾರ ಸಾವು

ಮಳವಳ್ಳಿ : ವೇಗವಾಗಿ ಬರುತ್ತಿದ್ದ ಬಸ್ ಬೈಕ್ ವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ದುರ್ಘಟನೆಯೊಂದು ಜರುಗಿದೆ.


ಪಟ್ಟಣದ ಕೋಟೆ ಗಂಗಾಮತ ಬೀದಿಯ ವಾಸಿ ರಾಘವೇಂದ್ರ ಎಂಬಾತನೇ ಮೃತಪಟ್ಟ ದುರ್ದೈಯಾಗಿದ್ದು ಸುಮಾರು 22 ವರ್ಷ ವಯಸ್ಸಿನ ಈತ ಎಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಕಳೆದ ಸೋಮವಾರ ಟಿ.ವಿ ರಿಪೇರಿ ಮಾಡಲೆಂದು ಬಾಚನಹಳ್ಳಿಗೆ ತೆರಳಿದ್ದ ಈತ ಕೆಲಸ ಮುಗಿಸಿಕೊಂಡು ‌ಸಂಜೆ 6. 30 ರ‌ ಸಮಯದಲ್ಲಿ ವಾಪಸ್ಸು ಮಳವಳ್ಳಿಗೆ ಬರುತ್ತಿದ್ದ ವೇಳೆ ಮಾರೇಹಳ್ಳಿ ಬಳಿ ಮಳವಳ್ಳಿ‌ಯಿಂದ ಕೊಳ್ಳೇಗಾಲ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸೊಂದು ವೇಗವಾಗಿ ಬಂದು ಬೈಕ್ ಗೆ ಡಿಕ್ಕಿ ಹೊಡೆಯಿತು ಎಂದು ಹೇಳಲಾಗಿದೆ.
ತಲೆ ಹಾಗೂ ಕಾಲಿನ‌ ಭಾಗಕ್ಕೆ ತೀವ್ರ ಗಾಯವಾಗಿ ಗಂಭೀರ ಸ್ಥಿತಿಯಲ್ಲಿದ್ದ ರಾಘವೇಂದ್ರ ನನ್ನು ಕೂಡಲೇ ಮಳವಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಮೃತಪಟ್ಟನೆಂದು ವರದಿಯಾಗಿದೆ.
ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿ ದ್ದಾರೆ.

error: