December 22, 2024

Bhavana Tv

Its Your Channel

ಮಳವಳ್ಳಿ ಎನ್ ಇ ಎಸ್ ಬಡಾವಣೆಯಲ್ಲಿ ನೀರಿಗಾಗಿ ನಿಲ್ಲದ ಬವಣೆ

ಮಳವಳ್ಳಿ : ಕಳೆದ ಮೂರು ವರ್ಷಗಳಿಂದ ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವ ಮಳವಳ್ಳಿ ಪಟ್ಟಣದ ಎನ್ ಇ ಎಸ್ ಬಡಾವಣೆ ಮೂರನೇ ವಾಡ್9 ಗೆ ಸೇರಿದ ಜನ ಹಲವಾರು ಭಾರಿ ಪುರಸಭೆಯ ಅಧಿಕಾರಿಗಳು ಜನಪ್ರತಿನಿಧಿ ಗಳಿಗೆ ದೂರು ಸಲ್ಲಿಸಿದರು ಪ್ರಯೋಜನವಾಗಿಲ್ಲ ಎಂದು ತಮ್ಮ ಗೋಳು ತೋಡಿಕೊಂಡ ಪ್ರಸಂಗ ಶಾಸಕರು ನಡೆಸಿದ ವಾಡ್9 ವಾರು ಸಭೆಯನ್ನು ಜರುಗಿತು.


ನೆನ್ನೆಯಿಂದ ದಿಡೀರ್ ಎಂದು ಪಟ್ಟಣದ ಎಲ್ಲಾ ಕಡೆ ವಾಡ್9 ವಾರು ಸಭೆ ನಡೆಸುತ್ತಿರುವ ಶಾಸಕ ಡಾ ಕೆ ಅನ್ನದಾನಿ ಅವರು ಪಟ್ಟಣದ ಮೂರನೇ ವಾಡ್9 ನಲ್ಲಿ ಕಳೆದ ಮೂರು ವರ್ಷಗಳಿಂದಲೂ ಕುಡಿಯಲು ಸರಿಯಾಗಿ ನೀರು ಸರಬರಾಜು ಆಗದೆ ಪರಿತಪಿಸುತ್ತಿರುವ ತಮ್ಮ ಗೋಳು ತೋಡಿಕೊಂಡರು.
ಬಹುತೇಕ ವಿದ್ಯಾವಂತರು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಉದ್ಯೋಗಸ್ಥರು ವಾಸಿಸುವ ಈ ಪ್ರತಿಷ್ಠಿತ ಬಡಾವಣೆಯ ಜನ ಪುರಸಭೆಗೆ ಅತಿ ಹೆಚ್ಚು ಕಂದಾಯ ಸಂದಾಯ ಮಾಡುತ್ತಿದ್ದು ಆದರೆ ಈ ಭಾಗದ ಜನರಿಗೆ ಕನಿಷ್ಠ ದಿನಕ್ಕೆ ಐದು ಬಿಂದಿಗೆ ನೀರು ಬರುತ್ತಿಲ್ಲ ಎಂದರೆ ಈ ಭಾಗದ ಜನರು ನೀರಿಗಾಗಿ ಎಷ್ಟು ನರಕಯಾತನೆ ಅನುಭವಿಸುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ಶಾಸಕರ ಎದುರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಬೆಳಿಗ್ಗೆ 7ರಿಂದ 8 ಗಂಟೆ ವರೆಗೆ ನೀರು ಬಿಡಲಾಗುತ್ತದೆ, ಬೇರೆ ಕಡೆ ಟ್ಯಾಬ್ ಕಿತ್ತುಹೋಗುವ ಹಾಗೆ ನೀರು ಭಾರಿ ರಭಸದಿಂದ ಹರಿದು ಚರಂಡಿ ಸೇರುತ್ತದೆ ಇಲ್ಲಿ ಮಾತ್ರ ಗಂಟೆಗೆ ಮೂರು ಬಿಂದಿಗೆ ನೀರು ಬಂದರೆ ಹೆಚ್ಚು, ಈ ತಾರತಮ್ಯ ಏಕೆ ಎಂದು ಆಕ್ರೋಶ ಹೊರಹಾಕಿದರು.
ಜೊತೆಗೆ ಈ ವಾಡ್9ನ ಬಹುತೇಕ ರಸ್ತೆಗಳು ಡಾಂಬರ್ ಕಂಡಿಲ್ಲ, ಮಳೆಗಾಲದಲ್ಲಿ ರಸ್ತೆಗಳು ಕೆಸರಿನ ಗದ್ದೆಗಳಂತಾಗುತ್ತವೆ, ಇನ್ನೂ ಚರಂಡಿಗಳAತೂ ಕನಸಿನ ಮಾತೇ ಸರಿ ಕೂಡಲೇ ಈ ಸಮಸ್ಯೆಗಳನ್ನು ಬಗೆಹರಿಸಿ ಎಂದು ಶಾಸಕರನ್ನು ಆಗ್ರಹಿಸಿದರು.
ಈ ಕುರಿತು ಪುರಸಭೆಯ ಅಧಿಕಾರಿಗಳು ಸಿಬ್ಬಂದಿ ಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು ನಿಮ್ಮ ಬೇಜವ್ದಾರಿ ತನದಿಂದ ಜನ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಹರಿಹಾಯ್ದರು.
ನಾಳೆ ಬೆಳಗಿನ ಜಾವ ನೀರು ಬಿಡುವ ವೇಳೆಗೆ ನಾನೇ ಖುದ್ದಾಗಿ ಬಂದು ಈ ವಾಡ್9 ನ ನೀರಿನ ಸಮಸ್ಯೆ ಬಗೆಹರಿಸುವುದರ ಜೊತೆಗೆ ಇಲ್ಲಿನ ರಸ್ತೆ ಚರಂಡಿಗಳ ನಿರ್ಮಾಣಕ್ಕೂ ತಕ್ಷಣ ಕ್ರಮ ವಹಿಸುವ ಭರವಸೆ ನೀಡಿದರು.
ಪುರಸಭಾಧ್ಯಕ್ಷೆ ರಾಧ ನಯಾಗರಾ, ಉಪಾಧ್ಯಕ್ಷ ಟಿ ನಂದಕುಮಾರ್, ಮುಖ್ಯಾಧಿಕಾರಿ ಪವನ್, ಸೇರಿದಂತೆ ಹಲವಾರು ಸದಸ್ಯರು ಅಧಿಕಾರಿಗಳು ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: