ಮಳವಳ್ಳಿ : ನಾಡಿನ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಮಳವಳ್ಳಿ ಸಿಡಿ ಹಬ್ಬವನ್ನು ಏಕಪಕ್ಷೀಯವಾಗಿ ರದ್ದು ಪಡಿಸಿ ರುವ ತಹಸೀಲ್ದಾರ್ ಅವರ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪಟ್ಟಣದ ನಾಗರೀಕ ಮುಖಂಡರು ಈ ಕುರಿತು ಜಿಲ್ಲಾಧಿಕಾರಿಗಳಿಗೆ ಹಾಗೂ ಉಪ ವಿಭಾಗಾಧಿಕಾರಿ ಗಳಿಗೆ ಮೇಲ್ಮನವಿ ಸಲ್ಲಿಸಿ ಸರಳ ಹಬ್ಬ ಆಚರಣೆಗೆ ಆಚರಣೆಗೆ ಅವಕಾಶ ಕಲ್ಲಿಸುವಂತೆ ಕೋರುವ ತೀರ್ಮಾನ ಕೈಗೊಂಡಿದ್ದಾರೆ.
ಈ ಕುರಿತು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದ್ದ ಮುಖಂಡರು ಬರುವ ಪೆಬ್ರವರಿ 8 ರಂದು ದಂಡಿನ ಮಾರಮ್ಮ ಹಬ್ಬ 11 ಮತ್ತು 12 ರಂದು ಪಟ್ಟಲದಮ್ಮ ಆರಾಧನೆಯ ಸಿಡಿ ನಡೆಯ ಬೇಕಿದ್ದು ಹಬ್ಬಕ್ಕೆ ಸಂಬAಧಿಸಿದ ಯಾವುದೇ ವಿಚಾರವಿದ್ದರೂ ಈ ಹಿಂದೆ ಎಲ್ಲಾ ಉಪ ವಿಭಾಗಾಧಿಕಾರಿ ಗಳು ನಾಗರೀಕ ಮುಖಂಡರ ಸಭೆ ಕರೆದು ಚರ್ಚೆ ನಡೆಸಿ ಅದರಂತೆ ಆದರಂತೆ ಆದೇಶ ಹೊರಡಿಸುತ್ತಿದ್ದರು
ಇದು ಹಲವಾರು ದಶಕಗಳಿಂದ ನಡೆದುಕೊಂಡು ಬಂದಿರುವ ನಡಾವಳಿ, ಆದರೆ ಇದೇ ಪ್ರಥಮ ಭಾರಿಗೆ ಯಾವುದೇ ಸಭೆ ನಡೆಸದೆ ತಹಸೀಲ್ದಾರ್ ಅವರು ಏಕಪಕ್ಷೀಯವಾಗಿ ಹಬ್ಬವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಆದೇಶ ಹೊರಡಿಸಿದ್ದು ಇದು ಹಬ್ಬ ಆಚರಣೆ ಸಮಿತಿ ಹಾಗೂ ನಾಗರೀಕ ಸಮಿತಿಗೆ ಮಾಡಿದ ಅವಮಾನವಾಗಿದೆ ಎಂದು ಹಿರಿಯ ಮುಖಂಡರೂ ಮಾಜಿ ಪುರಸಭಾಧ್ಯಕ್ಷರೂ ಆದ ಎಂ ಹೆಚ್ ಕೆಂಪಯ್ಯ , ಎಂ ಎ ಚಿಕ್ಕರಾಜು ಮತ್ತಿತರರು ತೀವ್ರ ಅಸಮಧಾನ ವ್ಯಕ್ತ ಪಡಿಸಿದರು.
ಈ ಹಂತದಲ್ಲಿ ಅಸಮಧಾನಿತ ಮುಖಂಡರನ್ನು ಸಮಾಧಾನ ಪಡಿಸಿದ ನಾಡ ಯಜಮಾನರು ಹಿರಿಯ ಮುಖಂಡರು ಆದ ಎಂ ಸಿ ವೀರೇಗೌಡ ಅವರು ಜಿಲ್ಲಾಧ್ಯಂತ ಕರೋನ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ತಹಸೀಲ್ದಾರ್ ಅವರು ಸಾರ್ವಜನಿಕ ಹಿತದೃಷ್ಟಿಯಿಂದ ಈ ಕ್ರಮ ಕೈಗೊಂಡಿದ್ದು ಇದನ್ನು ಗೌರವಿಸುವುದು ನಮ್ಮಗಳ ಕರ್ತವ್ಯವಾಗಿದೆ ಎಂದು ತಿಳಿ ಹೇಳಿದರು.
ಹಾಗೆಯೇ ಜನಜಂಗುಳಿಗೆ ಕಾರಣವಾಗುವ ಘಟ್ಟಗಳ ಮೆರವಣಿಗೆ, ಸಿಡಿ ಬಂಡಿ ಉತ್ಸವ, ಕೊಂಡೋತ್ಸವ ಗಳನ್ನು ಕೈಬಿಟ್ಟು ಸರಳವಾಗಿ ಮನೆಗಳಲ್ಲಿ ಪೂಜೆ ಜೊತೆಗೆ ಸಾಂಪ್ರದಾಯಿಕವಾಗಿ ದೇವಾಲಯಕ್ಕೆ ಜನ ಪ್ರತ್ಯೇಕವಾಗಿ ತೆರಳಿ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಕೋರಿ ಡಿ ಸಿ ಹಾಗೂ ಎ ಸಿ ಅವರಿಗೆ ಮನವಿ ಸಲ್ಲಿಸಿ ಅವರ ಅನುಮತಿ ಪಡೆದು ಸರಳವಾಗಿ ಸಿಡಿ ಹಬ್ಬ ಆಚರಿಸೋಣ ಎಂಬ ಸಲಹೆಗೆ ಸಭೆ ಒಪ್ಪಿತು,
ಸಭೆಯಲ್ಲಿ ಮಾಜಿ ಪುರಸಭಾಧ್ಯಕ್ಷ ಎಂ ಎಸ್ ದಯಾಶಂಕರ್, ಮುಖಂಡರಾದ ಅಪ್ಪಾಜಿಗೌಡ, ನಂಜುAಡಪ್ಪ, ಚಿಕ್ಕಮೊಗಣ್ಣ, ರಾಜ್ ಕುಮಾರ್, ಮತ್ತಿತರರು ಪಾಲ್ಗೊಂಡಿದ್ದರು.
ವರದಿ:ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ