ಮಳವಳ್ಳಿ : ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದ ವೃದ್ದೆಯೊಬ್ಬರನ್ನು ಗಸ್ತಿನಲ್ಲಿದ್ದ ಪೊಲೀಸರು ತಮ್ಮ ವಾಹನದಲ್ಲಿ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಾಲ್ಲೂಕಿನ ನೆಟ್ಕಲ್ ಗ್ರಾಮದ ವಾಸಿ ಚಂದ್ರಮ್ಮ ಎಂಬುವರೇ ಗಾಯಗೊಂಡವರಾಗಿದ್ದು ಸುಮಾರು 65 ವರ್ಷ ವಯಸ್ಸಿನ ಈ ವೃದ್ದೆ ಹಲ್ಲು ನೋವಿನ ಕಾರಣ ವೈದ್ಯರನ್ನು ಕಾಣಲೆಂದು ಸಂಜೆ 6.30 ರ ಸಮಯದಲ್ಲಿ ಪಂಡಿತಹಳ್ಳಿಗೆ ತಮ್ಮ ನಾಗಣ್ಣನ ಜೊತೆ ಬೈಕ್ ನಲ್ಲಿ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಮAಚನಹಳ್ಳಿ ಗ್ರಾಮದ ಬಳಿ ಬೈಕ್ ಗೆ ಅಡ್ಡಲಾಗಿ ಬಂದ ಮೇಕೆಗೆ ಡಿಕ್ಕಿ ಹೊಡೆಯುವುನ್ನು ತಪ್ಪಿಸಲು ಬ್ರೇಕ್ ಹಾಕಿದಾಗ ಹಿಂದೆ ಕುಳಿತಿದ್ದ ಚಂದ್ರಮ್ಮ ಆಯತಪ್ಪಿ ಕೆಳಗೆ ಬಿದ್ದರೆನ್ನ ಲಾಗಿದೆ.
ತಲೆಗೆ ಪೆಟ್ಟುಬಿದ್ದು ಗಾಯಗೊಂಡಿದ್ದರ ಜೊತೆಗೆ ಕಿವಿಯಲ್ಲಿ ಸಹ ರಕ್ತ ಸೋರುತ್ತಿದ್ದು ತೀವ್ರ ಅಸ್ವಸ್ಥರಾಗಿ ಬಿದ್ದಿದ್ದು ಅದೇ ಮಾರ್ಗವಾಗಿ ಬರುತ್ತಿದ್ದ 112 ಪೊಲೀಸ್ ಗಸ್ತು ವಾಹನದ ಚಾಲಕ ಮಾದೇಶ್ ಹಾಗೂ ಮುಖ್ಯ ಆರಕ್ಷಕ ಶಿವಣ್ಣ ಅವರುಗಳು ಆ ವೃದ್ದೆಯ ಸ್ಥಿತಿ ನೋಡಿ ಆಂಬ್ಯುಲೆನ್ಸ್ ಗೆ ಕಾಯುವುದರಿಂದ ಈಕೆಯ ಸ್ಥಿತಿ ಇನ್ನಷ್ಟು ಗಂಭೀರವಾಗುತ್ತದೆ ಎಂದು ಪೊಲೀಸ್ ವಾಹನದಲ್ಲಿ ಆಕೆಯನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿರುವ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಿದ್ದಾರೆ.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ