December 22, 2024

Bhavana Tv

Its Your Channel

ದೇವರ ದರ್ಶನ ಪಡೆದು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಮಳವಳ್ಳಿ : ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆದ ಮಹಿಳೆಯೊಬ್ಬರು ನಂತರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯೊಂದು ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ ಬಳಿ ಜರುಗಿದೆ.
ಬೆಂಗಳೂರಿನ ಲಗ್ಗೇರಿಯ ಚೌಡೇಶ್ವರಿ ಬಡಾವಣೆಯ ವಾಸಿ ಲೇಟ್ ಗೋಪಾಲ್ ರಾವ್ ಎಂಬುವರ ಪತ್ನಿ ಲಕ್ಷ್ಮಿ ಬಾಯಿ ಎಂಬುವರೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದು ಕಳೆದ 20 ರಂದು ಶುಕ್ರವಾರ ಈಕೆ ಶಿವನಸಮುದ್ರದ ಮಾರಮ್ಮನ ದರ್ಶನಕ್ಕೆ ಬಂದಿದ್ದರು ಎನ್ನಲಾಗಿದೆ.
ದೇವರ ದರ್ಶನದ ನಂತರ 66 ವರ್ಷ ವಯಸ್ಸಿನ ಈಕೆ ಪಕ್ಕದಲ್ಲೇ ಹರಿಯುವ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಈಕೆಯ ಶವ ನೆನ್ನೆ ಶನಿವಾರ ಬ್ಲಫ್ ಬಳಿಯ ಸಿ ಹೆಚ್ ಎಲ್ ಕಾಲುವೆಯ ಗೇಟ್ ಬಳಿ ಪತ್ತೆಯಾಗಿದೆ.
ಈ ಸಂಬAಧ ಪೊಲೀಸರಿಗೆ ದೂರು ನೀಡಿರುವ ಮೃತ ವೃದ್ದೆಯ ಮಗಳಾದ ರೂಪ ಎಂಬಾಕೆ ತನ್ನ ತಾಯಿ ಮಂಡಿ ನೋವು ಸೇರಿದಂತೆ ಇತರೆ ಆರೋಗ್ಯ ಸಮಸ್ಯೆ ಯಿಂದ ಬಳಲುತ್ತಿದ್ದು ಇದರಿಂದ ಜಿಗುಪ್ಸೆ ಗೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುವ ಬೆಳಕವಾಡಿ ಪೊಲೀಸರು ವೈದ್ಯಕೀಯ ಪರೀಕ್ಷೆ ನಂತರ ಶವವನ್ನು ವಾರಸುದಾರರಿಗೆ ನೀಡಿದ್ದಾರೆ.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: