ಮಳವಳ್ಳಿ : ಕನ್ನಡ ಸಾಹಿತ್ಯ ಪರಿಷತ್ ನ ಮಳವಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಪಟ್ಟಣದ ಎಲ್. ಚೇತನ್ ಕುಮಾರ್ ಅವರನ್ನು ಕಸಾಪ ಜಿಲ್ಲಾ ಘಟಕದ ಸಿ.ಕೆ.ರವಿಕುಮಾರ್ ಚಾಮಲಾಪುರ ನೇಮಕ ಮಾಡಿದ್ದಾರೆ.
ಕಸಾಪ ತಾಲ್ಲೂಕು ಘಟಕದ ನೂತನ ಅಧ್ಯಕ್ಷ ಎನ್.ಚೇತನ್ ಕುಮಾರ್ ಅವರನ್ನು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುಸ್ಕೂರು ಕೃಷ್ಣೇಗೌಡ, ಜಿ.ಪಂ.ಮಾಜಿ ಸದಸ್ಯ ಜಯರಾಜು, ನಿವೃತ್ತ ಕೆನರಾ ಬ್ಯಾಂಕ್ ಮ್ಯಾನೇಜರ್ ಎಚ್.ಕೆ.ಚಂದ್ರಹಾಸ್ ಹಿಟ್ಟನಹಳ್ಳಿ, ಮುಖಂಡರಾದ ಅಂದಾನಿ, ಮಹದೇವಸ್ವಾಮಿ ಸೇರಿದಂತೆ ಹಲವರು ಅಭಿನಂದಿಸಿದರು.
ತಾಲ್ಲೂಕಿನ ಪ್ರಗತಿಪರ ಚಿಂತಕರ ಬೇಡಿಕೆಯಂತೆ ಪರಿಶಿಷ್ಟ ಸಮುದಾಯದವರಿಗೆ ಈ ಬಾರಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಕಸಾಪ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಆಶ್ವಾಸನೆಯನ್ನು ಜಿಲ್ಲಾ ಘಟಕದ ಅಧ್ಯಕ್ಷ ಸಿ. ಕೆ. ರವಿ ಕುಮಾರ್ ಚಾಮಲಾಪುರ ಈಡೇರಿಸಿದ್ದಾರೆ ಎಂದು ತಾಲ್ಲೂಕಿನ ದಲಿತ ಮುಖಂಡರು ಅಭಿನಂದಿಸಿದರು.
ಸಮಾಜ ಸೇವಕರು, ಪ್ರಗತಿಪರ ಚಿಂತಕರು, ನಿವೃತ್ತ ಶಿಕ್ಷಕರು ಆದ ಚೇತನ್ ಕುಮಾರ್ ನೆಟ್ಕಲ್ ಅವರು ಕಳೆದ ಹಲವಾರು ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ವಿವಿಧ ಹಂತದ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರಲ್ಲದೆ ಪ್ರಸ್ತುತ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಅಧ್ಯಕ್ಷರಾಗಿ ನೇಮಕಗೊಂಡ ನಂತರ ವಾಹಿನಿಗೆ ಪ್ರತಿಕ್ರಿಯೆ ನೀಡಿದ ಚೇತನ್ ಕುಮಾರ್ ಅವರು ಪ್ರಪ್ರಥಮ ಬಾರಿಗೆ ಪರಿಷತ್‌ನ ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನವನ್ನು ದಲಿತ ವರ್ಗಕ್ಕೆ ಸೇರಿದ ನನ್ನನ್ನು ನೇಮಕ ಮಾಡಿದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರವಿಕುಮಾರ್ ಚಾಮಲಾಪುರ ಹಾಗೂ ತನ್ನ ನೇಮಕಕ್ಕೆ ಕಾರಣರಾದ ಶಾಸಕ ಡಾ ಕೆ ಅನ್ನದಾನಿ ಅವರಿಗೆ ತಮ್ಮ ಧನ್ಯವಾದಗಳನ್ನು ತಿಳಿಸಿದರು.
ಪರಿಷತ್ ನ ಕಾರ್ಯಚಟುವಟಿ ಕೆಗಳನ್ನು ಶಾಲಾ ಹಂತಕ್ಕೆ ಕೊಂಡ್ಯೊಯ್ದು ಮಕ್ಕಳಲ್ಲಿ ಕನ್ನಡಾಭಿಮಾನ ಬೆಳೆಸುವುದರ ಜೊತೆಗೆ ಪಟ್ಟಣದಲ್ಲಿ ಎಲ್ಲರ ಸಹಕಾರದಿಂದ ಕನ್ನಡ ಭವನ ನಿರ್ಮಾಣ ತನ್ನ ಗುರಿಯಾಗಿದೆ ಎಂದು ತಿಳಿಸಿದರು.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ